ನವಿಲೂರಿನಲ್ಲಿ ಹೆತ್ತ ತಾಯಿಯನ್ನೇ ಪಾಪಿ ಮಗ ಹಣಕ್ಕಾಗಿ ಹತ್ಯೆ ಮಾಡಿದ್ದಾನೆ. ನವಿಲೂರಿನ ತಮ್ಮಯ್ಯ, ಗೌರಮ್ಮ ಎಂಬುವವರು ಕೇವಲ ಒಂದು ಎಕರೆ ಜಮೀನಿನಲ್ಲಿ ಸಣ್ಣ ಗುಡಿಸಲು ಹಾಕಿಕೊಂಡು ಬದುಕು ದೂಡುತ್ತಿದ್ದವರು. ಗೌರಮ್ಮ ಒಬ್ಬ ಮಗ ಇದ್ದರೆ ಸಾಲದು ಅಂತ ಮೂವರಿಗೆ ಜನ್ಮಕೊಟ್ಟಿದ್ರು. ಎಲ್ಲರಿಗಿಂತ ಹಿರಿಯವನು ಇದೇ ಸ್ವಾಮಿ. ಇವನೇ ಒಂಭತ್ತು ತಿಂಗಳು ಹೆತ್ತು, ಹೊತ್ತು ಜನ್ಮವಿತ್ತ ತಾಯಿ ಎನ್ನುವುದನ್ನು ನೋಡದೆ ಭೀಕರವಾಗಿ ಕೊಲೆ ಮಾಡಿರುವ ಪಾಪಿ. ತಮ್ಮಯ್ಯ, ಗೌರಮ್ಮ ದಂಪತಿಯ ಹಿರಿಯ ಪುತ್ರ ಇದೇ ಪಾಪಿ ಸ್ವಾಮಿ.ಕಣ್ಣೆದುರಿಗೆ ಮಗ ಪೊಲೀಸ್ ಠಾಣೆ ಮೆಟ್ಟಿಲೇರುವುದನ್ನು ನೋಡಲಾಗಲ್ಲ ಅಂತ ಕಿರಿಯ ಮಗನಿಗೆ ಹೇಳಿ ತಾಯಿ ಗೌರಮ್ಮನೇ ಕೇಸನ್ನು ವಾಪಸ್ ತೆಗೆಸಿದ್ದರಂತೆ. ಇಷ್ಟಾದರೂ ಬುದ್ಧಿ ಕಲಿಯದ ಪಾಪಿ ಕೊನೆಗೂ ಹಣಕ್ಕಾಗಿ ಹೆತ್ತ ತಾಯಿಯನ್ನೇ ಹೊಡೆದು ಕೊಂದಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೈಸೂರು ಎಸ್.ಪಿ. ವಿಷ್ಣುವರ್ಧನ್ ಮತ್ತು ಎಎಸ್ಪಿ ನಾಗೇಶ್ ಸ್ಥಳಕ್ಕೆ ರಾತ್ರೋ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೈಲುಕುಪ್ಪೆ ಠಾಣೆ ಪೊಲೀಸರು ಆರೋಪಿ ಸ್ವಾಮಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಏನೇ ಆಗಲಿ ಹಣಕ್ಕಾಗಿ ಹೆತ್ತ ತಾಯಿಯನ್ನು ಬರ್ಭರವಾಗಿ ಹತ್ಯೆ ಮಾಡಿ ‘ತಾಮ್ರದ ದುಡ್ಡು ತಾಯಿ ಮಕ್ಕಳನ್ನು ತೊರೆಸಿತು’ ಎನ್ನುವ ಗಾದೆ ಮಾತನ್ನು ಈ ಪಾಪಿ ಮಗ ಸ್ವಾಮಿ ಸಾಬೀತು ಮಾಡಿಬಿಟ್ಟಿದ್ದಾನೆ. ಇಂತಹ ಪಾಪಿಗಳಿಗೆ ಸರಿಯಾದ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬೇಕಾಗಿದೆ.
