ಶನಿವಾರ ರಾತ್ರಿ ಭಾರೀ ಗಾಳಿ ಮಳೆಯಿಂದ 11 ಕೆವಿ. ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದಿತ್ತು. ಆದರೆ ವಿದ್ಯುತ್ ಸಂಪರ್ಕ ಕಡಿತಗೊಂಡಿರಲಿಲ್ಲ. ಇದರ ಅರಿವಿಲ್ಲದ ನಂದೀಶ್ ಇಂದು ಬೆಳಗ್ಗೆ ವಾಕಿಂಗ್ ಗೆ ಹೋದಾಗ ಆಕಸ್ಮಿಕವಾಗಿ ಈ ತಂತಿಯನ್ನು ತುಳಿದಿದ್ದು ಆಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
