ಹಾಡಹಗಲಲ್ಲೇ, ಎಲ್ಲರೂ ನೋಡನೋಡುತ್ತಿದ್ದಂತೆ ಸಕಲೇಶ್‌ಕುಮಾರ್ ಶೂಟೌಟ್ ನಡೆಸಿದ್ದಾನೆ. ಈತ ಬಿಜೆಪಿ ಮಾಜಿ ಶಾಸಕ ವೈ. ಎ.ನಾರಾಯಣಸ್ವಾಮಿ ಅವರ ಸಂಬಂಧಿ ಎಂದು ಹೇಳಲಾಗಿದೆ. ವೈ.ಎ.ನಾರಾಯಣಸ್ವಾಮಿ ಕುಟುಂಬಸ್ಥರಿಗೆ ಸೇರಿದ ಗಣಿಗಾರಿಕಾ ಪ್ರದೇಶಕ್ಕೆ ರಸ್ತೆ ಮಾಡಲು ವಿರೋಧ ವ್ಯಕ್ತಪಡಿಸಿದ್ದ ಕಾರಣಕ್ಕೆ ಈ ಶೂಟೌಟ್ ನಡೆದಿದೆ ಎನ್ನಲಾಗಿದೆ. ಗಣಿಗಾರಿಕಾ ಪ್ರದೇಶದ ರಸ್ತೆ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿ ಚಿಕನ್ ರವಿ ಮತ್ತು ಇತರ ಸ್ಥಳೀಯರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಸಕಲೇಶ್‌ಕುಮಾರ್ ಶೂಟೌಟ್ ಮಾಡಿದ್ದಾನೆ. ಶೂಟೌಟ್‌ನಿಂದ ಗಾಯಗೊಂಡ ರವಿಯನ್ನ ಮಂಚೇನಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ನಂತರ ಸ್ಥಳೀಯರು ಸ್ವಲ್ಪವೂ ತಡಮಾಡದೆ ಗಾಯಾಳುವನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದಕ್ಕೂ ಮೊದಲು ಸಕಲೇಶ್‌ಕುಮಾರ್‌ಗೆ ರವಿ ಕಲ್ಲಿನಿಂದ ಹೊಡೆದಿದ್ದ ಎಂಬ ಮಾತೂ ಕೇಳಿಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

