ಕರ್ನಾಟಕದ ಪ್ರವಾಸಕ್ಕೆ ಬಂದಿದ್ದ ತಮಿಳುನಾಡಿನ ಇಬ್ಬರು ಮೆಡಿಕಲ್ ಕಾಲೇಜಿನ ವಿಧ್ಯಾರ್ಥಿನಿಯರು ಸಮುದ್ರದ ಅಲೆಗಳ ಹೊಡೆದತಕ್ಕೆ ಕೊಚ್ಚಿ ಹೋದ ಘಟನೆ ಗೋಕರ್ಣದ ಕುಡ್ಲೆ ಕಡಲ ತೀರದ ಜಟಾಯುತೀರ್ಥದ ಬಳಿ ಗುರುವಾರ ಸಂಜೆ ಸಂಭವಿಸಿದೆ.ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದ ಇವರು ಪ್ರವಾಸದ ಸಂದರ್ಭದಲ್ಲಿ ಗೋಕರ್ಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮೃತರನ್ನು ತಮಿಳುನಾಡು ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್ (23) ಎಂದು ಗುರುತಿಸಲಾಗಿದೆ.ವಿದ್ಯಾರ್ಥಿನಿಯರ ಮೃತ ದೇಹಗಳನ್ನು ಮೇಲೆತ್ತಿ ತರಲಾಗಿದ್ದು ಗೋಕರ್ಣ ಪೊಲೀಸ್ ನಿರೀಕ್ಷಕ ಶ್ರೀಧರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

