ತಂದೆಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲೆಂದು ಯುವತಿಯೊಬ್ಬಳು ಇಲ್ಲಿನ ಗೋಪಾಲ್ಗಂಜ್ಗೆ ಬಂದಿದ್ದಳು.ಆದರೆ, ತಮ್ಮ ಊರಿಗೆ ಹೋಗುವ ರೈಲನ್ನು ತಪ್ಪಿಸಿಕೊಂಡಿದ್ದರು. ಹೀಗಾಗಿ ರಾತ್ರಿಯಿಡೀ ನಿಲ್ದಾಣದಲ್ಲಿ ಉಳಿಯಬೇಕಾಯಿತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯುವತಿ ನೀರು ತರಲು ಹೋದಾಗ, ಮೂವರು ಯುವಕರು ಆಕೆಯ ಬಾಯಿ ಮುಚ್ಚಿ ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಹಲ್ಲೆಯ ನಂತರ ದಾಳಿಕೋರರು ಪರಾರಿಯಾಗಿದ್ದು, ಯುವತಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇದೀಗ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಕುಚಾಯ್ಕೋಟ್ ನಿವಾಸಿ ಅಭಿಷೇಕ್ ಬಿಂದ್ ಎಂದು ಗುರುತಿಸಲಾಗಿದೆ. ಬಂಧಿತ ಯುವಕನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಉಳಿದ ಇಬ್ಬರು ಶಂಕಿತರನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

