ಸ್ನೇಹಿತರ ಜೊತೆ ಬೆಟ್ಟಿಂಗ್ ಕಟ್ಟಿ ನೀರು ಬೆರಸದೆ ಐದಾರು ಬಾಟಲ್ ಮದ್ಯ ಸೇವಿಸಿ ಅಸ್ವಸ್ಥನಾದ ತಾಲ್ಲೂಕಿನ ಪೂಜಾರಹಳ್ಳಿ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.ಮದ್ಯ ಕುಡಿ ಯಲು ಪ್ರಚೋದನೆ ನೀಡಿದ ಆರೋಪದ ಮೇಲೆ ಸ್ನೇಹಿತರಾದ ವೆಂಕಟರೆಡ್ಡಿ, ಸುಬ್ರಮಣಿ ಹಾಗೂ ಇನ್ನೂ ನಾಲ್ವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವೆಂಕಟರೆಡ್ಡಿ ಹಾಗೂ ಸುಬ್ರಮಣಿಯನ್ನು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ. ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೂಜಾರಹಳ್ಳಿ ಗ್ರಾಮದ ಕಾರ್ತೀಕ್ (21) ಮೃತ ಯುವಕ. ನೀರು ಬೆರಸದೆ ಮದ್ಯ ಸೇವಿಸುವುದಾಗಿ ಗ್ರಾಮದ ಸ್ನೇಹಿತರಾದ ವೆಂಕಟರೆಡ್ಡಿ, ಸುಬ್ರಮಣಿ ಹಾಗೂ ಇತರರೊಂದಿಗೆ ₹10 ಸಾವಿರ ಬೆಟ್ಟಿಂಗ್ ಕಟ್ಟಿದ್ದ.
bigtvnews | Hubli Dharwad News | Kannada News | Karnataka News Hubli News | News In Hubli | Local news

