ರಾಚೇನಹಳ್ಳಿ ಕೆರೆ ಬಳಿ ಅಪರಿಚಿತ ವ್ಯಕ್ತಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಫರ್ವೇಜ್‌ನನ್ನು ಬಂಧಿಸಲಾಗಿದೆ. ಈತ ನೀಡಿದ ಮಾಹಿತಿ ಮೇರೆಗೆ ಮತ್ತೂಬ್ಬ ಆರೋಪಿ ಸದಾಲತುಲ್ಲಾ ಅಬ್ದುಲ್ ರಜಾಕ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಆರೋಪಿ ಫರ್ವೇಜ್ ಮತ್ತೂಬ್ಬ ಆರೋಪಿ ಅಬ್ದುಲ್ ರಜಾಕ್‌ನಿಂದ ಕಡಿಮೆ ಬೆಲೆ ಎಂಡಿಎಂಎ ಕ್ರಿಸ್ಟೆಲ್ ಖರೀದಿಸಿ ನಗರಕ್ಕೆ ತಂದು ಪರಿಚಿತ ಗಿರಾಕಿಗಳಿಗೆ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.ಮಂಗಳೂರು ಬಬ್ಬುಕಟ್ಟೆಯ ಸದಾಲತುಲ್ಲಾ ಅಬ್ದುಲ್ ರಜಾಕ್(40) ಮತ್ತು ಫರ್ವೇಜ್(32) ಬಂಧಿತರು. ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 225 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟೆಲ್ ಜಪ್ತಿ ಮಾಡಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

