Breaking News

ಹುಬ್ಬಳ್ಳಿ : ಮೊಬೈಲ್ ಕ್ರೇನ್ ಕಳ್ಳತನ ಮಾಡಿದ ಆರೋಪಿಗಳ ಬಂಧನ!

ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ತಾರಿಹಾಳ್ ವ್ಯಾಪ್ತಿಯ ಕೈಗಾರಿಕಾ ಪ್ರದೇಶ ಬ್ಯಾಂಕ್ ಸರ್ಕಲ್ ನ ಎಡಬದಿಯಲ್ಲಿ ನಿಲ್ಲಿಸಿದ್ದ ರಘುನಾಥ್ ಸುರೇಶ್ ಕದಂ ಅವರಿಗೆ ಸಂಬಂಧಿಸಿದ ಹೈಡ್ರೋಲಿಕ್ ಮೊಬೈಲ್ ಕ್ರೇನ್ 14 ಲಕ್ಷ ಮೌಲ್ಯದ ಕ್ರೇನನ್ನು ಕಳ್ಳತನ ಮಾಡಿದರ ಬಗ್ಗೆ ಪೊಲೀಸ್ ದಿನಾಂಕ.ಎ.

27 ರಂದು ದೂರು ದಾಖಲು ಮಾಡಿದ್ದರು. ಪೊಲೀಸ್ ತಂಡವು ಚುರುಕಿನ ಕಾರ್ಯಾಚರಣೆಯನ್ನು ನಡೆಸಿ 72 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದು, ಆರೋಪಿ ಸೈಫುಲ್ಲಾ ಕಮಲಾ ಸಾಹೇಬ್ ಬಂಧಿತ ವ್ಯಕ್ತಿ. ಆರೋಪಿಯಿಂದ ಮೊಬೈಲ್ ಕ್ರೇನನ್ನು ವಶಪಡಿಸಿಕೊಂಡಿದ್ದು, ಹುಬ್ಬಳ್ಳಿ ಗ್ರಾಮೀಣ ಠಾಣೆ ಸಿಬ್ಬಂದಿ ಹಾಗೂ ಪೊಲೀಸರ ಈ ಕಾರ್ಯಕ್ಕೆ ಮೇಲಾಧಿಕಾರಿಗಳು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *