Breaking News

ಮುದ್ದೇಬಿಹಾಳ: ಹೇಸ್ಕಾಂ ಸೆಕ್ಷನ್ ಅಧಿಕಾರಿ ಶವ ಪತ್ತೆ!!

ಹೆಸ್ಕಾಂನ ಗ್ರಾಮೀಣ ವಲಯದ ಸೆಕ್ಷನ್ ಅಧಿಕಾರಿ ತಾಲ್ಲೂಕಿನ ಕುಂಟೋಜಿ ಗ್ರಾಮದ ಶಿವಪ್ಪ ಎಂ.ಆರೇಶಂಕರ ಅವರ ಶವ ಬುಧವಾರ ಕುಂಟೋಜಿ ಬಸವ ಇಂಟರ್‌ನ್ಯಾಶನಲ್ ಸ್ಕೂಲ್ ಹಿಂಭಾಗದ ಜಮೀನೊಂದರ ಗಿಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ನಾಲ್ಕು ವರ್ಷಗಳಿಂದ ಹೆಸ್ಕಾಂನಲ್ಲಿ ಗ್ರಾಮೀಣ ಭಾಗದ ಸೆಕ್ಷನ್ ಅಧಿಕಾರಿಯಾಗಿದ್ದ ಆರೇಶಂಕರ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು,ಪುತ್ರ ಇದ್ದಾರೆ. ಶಿವಪ್ಪ ಸಾವನ್ನಪ್ಪುವ ಮುನ್ನ ತನ್ನ ಸ್ನೇಹಿತರಿಗೆ, ಸಹೋದರರಿಗೆ ವಾಟ್ಸಾಪ್‌ನಲ್ಲಿ ಕೆಲವು ಸಂದೇಶ ಹಾಕಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜಯ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *