ಹುಬ್ಬಳ್ಳಿಯ ಕಲ್ಯಾಣ ಶೆಟ್ಟರ್ ಕುಟುಂಬಸ್ಥರು ಮತ್ತು ಸಂಬಂಧಿಕರು ಸೇರಿ ಒಟ್ಟು 45 ಜನ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಹುಬ್ಬಳ್ಳಿಯಿಂದ ಏಪ್ರೀಲ್ 11 ರಂದು ಬಸ್ ನಿಂದ ಕಾಶ್ಮೀರದತ್ತ ಪ್ರಯಾಣ ಬೆಳಿಸಿದ್ದ ಕಲ್ಯಾಣಶೆಟ್ಟರ್ ಕುಟುಂಬ,ಏ18 ರಂದು ಪೆಹಲ್ಗಾಮ್ ದಲ್ಲಿ ಇಡೀ ದಿನ ಎಂಜಾಯ್ ಮಾಡಿದ್ದಾರೆ.ಏಳು ಕಿಲೋಮೀಟರ್ ಬೆಟ್ಟ, ಗುಡ್ಡದಲ್ಲಿ ಕುದುರೆ ಸವಾರಿ ಮಾಡಿ ಪೆಹಲ್ಗಾಮ್ ಸೇರಿಕೊಂಡಿದ್ದರು.ಪೆಹಲ್ಗಾಮ್ ಶಾಂತವಾಗಿರುವ ಪ್ರದೇಶ ಅಲ್ಲಿ ಯಾವುದೇ ಹೆಚ್ಚಿನ ಭದ್ರತೆ ಅವಶ್ಯಕತೆ ಇಲ್ಲ,ಆದರೆ ಉಗ್ರರು ಕಾಡಿನ ಮಾರ್ಗವಾಗಿ ನಡೆದುಕೊಂಡು ಬಂದಿರುವ ಸಾಧ್ಯತೆಯಿದೆ,ದಾಳಿಗೂ ಮುನ್ನ ಕಾಶ್ಮೀರದಲ್ಲಿ ವಿವಿಧ ಕಡೆ ಭಾರಿ ಮಳೆ ಮತ್ತು, ಭೂ ಕುಸಿತವಾಗಿತ್ತು,ಆದರೆ ಈ ಸ್ಥಳ ಸುರಕ್ಷಿತವಾಗಿತ್ತು ಹೀಗಾಗಿ ಇದನ್ನೇ ಟಾರ್ಗೆಟ್ ಮಾಡಿ ಉಗ್ರರರು ದಾಳಿ ಮಾಡಿರಬಹುದೆಂದು ತಿಳಿಸಿದರು. ಧಾರವಾಡ, ಗದಗ, ಪುಣೆ, ಬೆಂಗಳೂರಿನಿಂದ ಸುರಕ್ಷಿತವಾಗಿ ಹುಬ್ಬಳ್ಳಿಗೆ ತಲುಪಿದರು ಎಂದು ಕುಟುಂಬ ಸದಸ್ಯರು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

