Breaking News

ಮಂಗಳೂರು: ಕಂಪ್ಯೂಟರ್ ಮಾರಾಟಗಾರರಿಗೆ ಬಲೆ ಬೀಸಿ ₹44 ಲಕ್ಷ ವಂಚನೆ; ‘ಗ್ಲೋಬಲ್ ಐಟಿ ವರ್ಲ್ಡ್’ ಹೆಸರಲ್ಲಿ ಪಂಗನಾಮ!

ನಗರದ ವಿವಿಧ ಕಂಪ್ಯೂಟರ್ ಮಾರಾಟ ಮಳಿಗೆಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಹಾಗೂ ಉಪಕರಣಗಳನ್ನು ಖರೀದಿಸಿ, ಹಣ ನೀಡದೆ ವಂಚಿಸಿರುವ ಅಂತರರಾಜ್ಯ ಮಟ್ಟದ ವಂಚನೆ ಜಾಲವೊಂದು ಬೆಳಕಿಗೆ ಬಂದಿದೆ. ಎಂ.ಜಿ. ರೋಡ್‌ನ ‘ಹೀರಾ ಐಟಿ ಸೊಲ್ಯೂಷನ್ಸ್’ ಸೇರಿದಂತೆ ಹಲವು ಸಂಸ್ಥೆಗಳಿಗೆ ಒಟ್ಟು ₹44.38 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ದೂರು ದಾಖಲಾಗಿದೆ. ಮಂಗಳೂರಿನ ಮಿಷನ್ ಸ್ಟ್ರೀಟ್‌ನಲ್ಲಿ ‘ಗ್ಲೋಬಲ್ ಐಟಿ ವರ್ಲ್ಡ್’ ಎಂಬ ಹೆಸರಿನ ಅಂಗಡಿ ತೆರೆದಿದ್ದ ಅಮಿತ್ ಮತ್ತು ಇಮ್ತಿಯಾಜ್ ಎಂಬುವವರು ಈ ಕೃತ್ಯ ಎಸಗಿದ್ದಾರೆ. ಆರಂಭದಲ್ಲಿ ನಗದು ನೀಡಿ ಸಣ್ಣ ಪ್ರಮಾಣದ ಖರೀದಿ ಮಾಡಿ ಉದ್ಯಮಿಗಳ ನಂಬಿಕೆ ಗಳಿಸಿದ್ದರು. ನಂತರ ಮಾರ್ಚ್ 12 ರಿಂದ 20ರ ಅವಧಿಯಲ್ಲಿ ಹೀರಾ ಐಟಿ ಸೊಲ್ಯೂಷನ್ಸ್‌ನಿಂದ ₹8.42 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಸಾಲದ ಆಧಾರದ ಮೇಲೆ ಪಡೆದುಕೊಂಡು ಪರಾರಿಯಾಗಿದ್ದಾರೆ. ವಂಚನೆಗೊಳಗಾದ ಉದ್ಯಮಿ ರಾಜಾನಾಯ್ಕ ಅವರು ಇತರ ಉದ್ಯಮಿಗಳೊಂದಿಗೆ ವಿಚಾರಿಸಿದಾಗ, ಆರೋಪಿಗಳು ಇದೇ ರೀತಿ ಐದು ಪ್ರಮುಖ ಸಂಸ್ಥೆಗಳಿಗೆ ವಂಚಿಸಿರುವುದು ತಿಳಿದುಬಂದಿದೆ. ಐಪೆಕ್ಸ್ ಟೆಕ್ನಾಲಜೀಸ್ (₹22.58 ಲಕ್ಷ), ಡಿಜಿಟಲ್ ಆಟೋವಿಜ್ (₹7.11 ಲಕ್ಷ) ಸೇರಿದಂತೆ ಒಟ್ಟು 6 ಸಂಸ್ಥೆಗಳಿಂದ ₹44,38,071 ಮೌಲ್ಯದ ಸಲಕರಣೆಗಳನ್ನು ಪಡೆದು ಹಣ ನೀಡದೆ ಅಂಗಡಿ ಮುಚ್ಚಿ ಎಸ್ಕೇಪ್ ಆಗಿದ್ದಾರೆ. ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್‌ನ ಚೆಕ್ ನೀಡಿ ವಂಚಿಸಿರುವ ಈ ಕಿಲಾಡಿಗಳ ವಿರುದ್ಧ ನಗರದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ದಲಿತ ಮಹಿಳೆಗೆ ಜಾತಿ ನಿಂದನೆ ಮಾಡಿ, ಲೈಂಗಿಕ ಕಿರುಕುಳ : ‘MSIL’ ಅಧಿಕಾರಿಗಳ ವಿರುದ್ಧ ದೂರು ದಾಖಲು!

ಬೆಂಗಳೂರು : ದಲಿತ ಮಹಿಳೆಯನ್ನು ಎಂಎಸ್‌ಐಎಲ್ ಅಧಿಕಾರಿಗಳು ಇದೀಗ ಅವಮಾನ ಮಾಡಿದ್ದಾರೆ. ಎಂಎಸ್‌ಐಎಲ್ ನಲ್ಲಿ ಕೆಲಸ ಮಾಡುತ್ತಿರುವ ದಲಿತ ಮಹಿಳೆಯ …

Leave a Reply

Your email address will not be published. Required fields are marked *