ತಾಲ್ಲೂಕಿನ ಡಿ.ಅಂತಾಪುರ ಕೊರಚರಹಟ್ಟಿಯ ಗ್ರಾಮದಲ್ಲಿನ ಕೆಲ ವ್ಯಕ್ತಿಗಳು ಆಂಧ್ರ ಮೂಲದ ಶಿವಾರೆಡ್ಡಿ ಎನ್ನುವ ವ್ಯಕ್ತಿಗೆ ನಕಲಿ ಬಂಗಾರವನ್ನು ಅಸಲಿ ಬಂಗಾರ ಎಂದು ನಂಬಿಸಿ ₹ 10 ಲಕ್ಷ ಹಣ ವಂಚಿಸಿ ಪರಾರಿಯಾದ ಘಟನೆ ಶನಿವಾರ ನಡೆದಿದೆ.ಕೊರಚರಹಟ್ಟಿ ಗ್ರಾಮದ ಆರೋಪಿ ತಿರುಪತಿ, ಇತನ ಸಹಚರರು ಸೇರಿ ಶಿವಾರೆಡ್ಡಿ ಅವರಿಗೆ ನಮ್ಮ ಬಳಿ 1 ಕೆಜಿ ಅಸಲಿ ಬಂಗಾರವಿದ್ದು ₹ 40 ಲಕ್ಷಕ್ಕೆ ಮಾರಾಟ ಮಾಡಲಾಗುವುದು ಎಂದು ದೂರವಾಣಿ ಕರೆಯ ಮೂಲಕ ತಿಳಿಸಿದ್ದಾರೆ.ತೋರಣಗಲ್ಲು ಠಾಣೆಯ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ತಿರುಪತಿಯನ್ನು ಸೋಮವಾರ ಬಂಧಿಸಿ ಆತನಿಂದ ₹ 10 ಲಕ್ಷ ಹಣವನ್ನು ವಶಪಡಿಸಿಕೊಂಡು ಆತನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ವಂಚನೆಗೆ ಒಳಗಾದ ಶಿವಾರೆಡ್ಡಿಯವರಿಗೆ ಹಣವನ್ನು ಮರಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

