ಬೂದನಗುಡ್ಡ ಬಸವೇಶ್ವರ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣ ಚಂಡೂನವರ್, ಲಾಲಸಾಬ್ ಬಾವಿ, ಮಹಾಂತೇಶ ಮಾಳಗಿ, ಶಿವರಾಜ್ ಜೀವಕನವರ್, ನಾಗರಾಜ್ ಚೌಡಣವರ್, ಸಿದ್ದರಾಮ ಮರದಣವರ್, ರವಿ ಕೊಳೂರ್, ಮಂಜುನಾಥ ಮೊಸಳಣವರ್ ಎಂಬುವವರನ್ನು ಬಂಧಿಸಿದ್ದಾರೆ. ಮೇ 28 ರಂದು ಆರೋಪಿಗಳು ಬೂದನಗುಡ್ಡದ ಬಸವೇಶ್ವರ ಮೂರ್ತಿಯನ್ನು ಭಗ್ನಗೊಳಿಸಿ ಪರಾರಿಯಾಗಿದ್ದರು. ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸಿದಾಗಿ, ಬಸವವೇಶ್ವರ ಮೂರ್ತಿಯ ಹಣೆಯಲ್ಲೊ ಅಪಾರ ಪ್ರಮಾಣದ ಬೆಲೆಬಾಳುವ ಹವಳದ ವಜ್ರ, ಮುತ್ತು ಇವೆ. ಅವುಗಳನ್ನು ಕಳವು ಮಾಡಬೇಕು ಎಂಬ ಮೂಢನಂಬಿಕೆಯಿಂದ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದು, ಆರೋಪಗಳನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





