Breaking News

ಹರಿಯಾಣ ಗ್ಯಾಂಗ್​ ರೇಪ್​, ಸರ್ಕಾರಕ್ಕೆ ಕಪ್ಪು ಚುಕ್ಕೆ..

ಹರಿಯಾಣದ ರಾವರಿ ಎನ್ನುವ ಪ್ರದೇಶದಲ್ಲಿ ಸಿಬಿಎಸ್​​ಸಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್​ ರೇಪ್ ಪ್ರಕರಣ ಸಿಎಂ ಮನೋಹರ್​ ಲಾಲ್​ ಖಟ್ಟರ್ ಸರ್ಕಾರಕ್ಕೆ ಒಂದು ದೊಡ್ಡ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಆ ದಿನದಂದು ಮಹೆಂದ್ರಘಡ್​​ನಲ್ಲಿರುವ ಶಿಕ್ಷಣ ಸಚಿವ ರಾಮ್​ ಬಿಲಾಸ್​ ಶರ್ಮ ತಾಯಿ ವಿಧಿವಶರಾಗಿದ್ದರು. ಈ ವೇಳೆ ಸಂತಾಪ ಸೂಚಿಸಲು ಬರುತ್ತಿದ್ದ ವಿವಿಐಪಿಗಳಿಗೆ ಭದ್ರತೆಯನ್ನು ನೀಡಲು ಸ್ಥಳೀಯ ಪೊಲೀಸರು ತೆರಳಿದ್ದರು. ಇದರಿಂದ ಅತ್ಯಾಚಾರಿಗಳು ತಪ್ಪಿಸಿಕೊಳ್ಳಲು ಅನುಕೂಲವಾಯಿತು ಎಂದು ಸರ್ಕಾರ ಕಾರಣ ನೀಡಿದೆ. ಇದೇ ವಿಚಾರವಾಗಿ ಅಮಾನತುಗೊಂಡ ಎಸ್​ಐ ಹೀರಾಮಣಿ, ಸಂತ್ರಸ್ತರು ನಮ್ಮನ್ನು ಸರಿಯಾದ ಸಮಯಕ್ಕೆ ಸಂಪರ್ಕಿಸಿದ್ದರೆ, ಅತ್ಯಾಚಾರಿಗಳನ್ನು ಮಟ್ಟ ಹಾಕುತ್ತಿದ್ದೆವು ಎಂದು ಹೇಳಿದ್ದಾರೆ.
ರೇಪ್​ ಮಾಡಿದ್ದ ಮಗನ ಬಗ್ಗೆ ತಂದೆಯೇ ಮಾಹಿತಿ ನೀಡಿದ್ರೂ, ಪೊಲೀಸ್ರು ಸುಮ್ಮನಿದ್ರು..!
ಇನ್ನು ಈ ಪ್ರಕರಣದ ಆರೋಪಿ ನಿಶು ಫೋಗಾಟ್ ತಂದೆ, ರೇಪ್​ ಬಳಿಕ ಪೊಲೀಸರಿಗೆ ನಿಶು ಫೋಗಾಟ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಿದ್ರು. ಆದ್ರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಹೋದಾಗ ಪೊಲೀಸರಿಗೆ ಯಾವುದೇ ಸಕ್ಷ್ಯಾಧಾರಗಳು ಸಿಕ್ಕಿರಲಿಲ್ಲ. ಘಟನೆಯಲ್ಲಿ ಭಾಗಿಯಾದ ಆರೋಪಿ ಡಾಕ್ಟರ್​ನನ್ನು ಬಂಧಿಸಿದಾಗ ನಿಜಾಂಶ ಹೊರಬಂದಿದೆ. ಅಲ್ಲದೇ ರೇಪ್​ ನಡೆದ ಸ್ಥಳದಲ್ಲಿ ಯಾವಾಗಲೂ ಮದ್ಯದ ಪಾರ್ಟಿಯನ್ನು ಫೋಗಾಟ್ ಏರ್ಪಡಿಸುತ್ತಿದ್ದ. ಇವರು ಕುಡಿದ ಮತ್ತಿನಲ್ಲಿ ಮೈ ಮೇಲಿನ ಶರ್ಟ್​ ಬಿಚ್ಚಿ ವಿಚಿತ್ರವಾಗಿ ಡ್ಯಾನ್ಸ್​ ಮಾಡುತ್ತಿದ್ರು. ಇಂತಹ ಸಾಕಷ್ಟು ವಿಡಿಯೋಗಳನ್ನ ಫೋಗಾಟ್​ ತನ್ನ ಫೇಸ್​ಬುಕ್​ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾನೆ.
ಪೊಲೀಸರ ಬೇಜವಾಬ್ದಾರಿ
ರೇಪ್​ ಆಗಿದ್ದರ ಬಗ್ಗೆ ಠಾಣೆಗೆ ಕಂಪ್ಲೆಂಟ್​ ನೀಡಲು ಸಂತ್ರಸ್ತರು ಹೋದಾಗ ಮೊದಲು ರೇಪ್ ಆಗಿದೆಯೇ ಇಲ್ಲವೇ ಎಂದು ಆಸ್ಪತ್ರೆಯಲ್ಲಿ ತೋರಿಸಿ ಎಂದು ಪೊಲೀಸ್ರು ಬೇಜವಾಬ್ದಾರಿತನ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಸಂತ್ರಸ್ತರು ಅದೇ ರಾತ್ರಿ ಮ್ಯಾಜಿಸ್ಟ್ರೇಟ್​ ಬಳಿಗೆ ಹೋದಾಗ ಪೊಲೀಸರಿಗೆ ಪ್ರಕರಣ ದಾಖಲಿಸಿಕೊಳ್ಳುವಂತೆ ತಿಳಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಕರಣದ ಅಪರಾಧ ಸ್ಥಳವನ್ನ ಉಲ್ಲೇಖಿಸಿಲ್ಲ ಮತ್ತು ಆ ಸ್ಥಳವನ್ನ ಪರಿಶೀಲನೆಯೇ ಮಾಡಿರಲಿಲ್ಲ. ಯಾವಾಗ ಈ ಘಟನೆ ಮಾಧ್ಯಮಗಳ ಮೂಲಕ ದೇಶದಾದ್ಯಂತ ಪ್ರಕಟವಾಯಿತೋ ಅವಾಗ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.
Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *