ಮೀನುಗಾರಿಕಾ ಬಂದರಿನಲ್ಲಿ ಹೋಲ್‌ಸೇಲ್ ಮೀನು ಮಾರಾಟದ ಸಂಸ್ಥೆಗೆ ಕಮಿಷನ್ ಆಧಾರದಲ್ಲಿ ಮೀನು ಮಾರ್ಕೆಟಿಂಗ್ ವ್ಯವಹಾರವನ್ನು ನಡೆಸುತ್ತಿರುವ ಪ್ರಶಾಂತ್ ಎಂಬಾತ ಸಂಸ್ಥೆಗೆ 90 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.ಪ್ರಶಾಂತ ಕೆಲವು ವರ್ಷಗಳಿಂದ ಕಮಿಷನ್ ಆಧಾರದಲ್ಲಿ ಮೀನು ವ್ಯವಹಾರ ನಡೆಸಿ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿ ಸಂಸ್ಥೆಗೆ ನೀಡುತ್ತಿರುವ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ವ್ಯವಹಾರದಿಂದ ಬರಬೇಕಾದ ಹಣವು ಸರಿಯಾಗಿ ಸಂಸ್ಥೆಯ ಖಾತೆಗೆ ಜಮಾ ಅಗದೇ ಇರುವುದು ಕಂಡು ಬಂದಿದ್ದು, ಈ ಬಗ್ಗೆ ಗ್ರಾಹಕರನ್ನು ವಿಚಾರಿಸಿದಾಗ ಅವರು ಹಣವನ್ನು ಪ್ರಶಾಂತನಿಗೆ ನೀಡಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ 90 ಲಕ್ಷ ರೂ. ಹಣ ಸಂಸ್ಥೆಯ ಖಾತೆಗೆ ಜಮೆ ಆಗದಿರುವುದು ತಿಳಿದು ಬಂದಿದೆ. ಆರೋಪಿ ಹಣವನ್ನು ಸಂಸ್ಥೆಗೆ ನೀಡದೆ ಆತನ ಸ್ವಂತಕ್ಕೆ ಬಳಸಿ ವಂಚನೆ ಎಸಗಿರುವುದಾಗಿ ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

