ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಗೆ ಪಾಕಿಸ್ತಾನದ ಪತರಗುಟ್ಟಿದೆ. ಈ ಕಾರ್ಯಾಚರಣೆಯಲ್ಲಿ ಉಗ್ರ ಮಸೂದ್ ತನ್ನ 10 ಮಂದಿಯನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾನೆ. ಮಸೂದ್ ನ ಸಹೋದರ, ಸಹೋದರಿ ಸೇರಿ 10 ಮಂದಿ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ.ದಾಳಿಯ ನಂತರ, ಮಸೂದ್ ಅಜರ್, ಈ ದಾಳಿಯಲ್ಲಿ ನಾನು ಸತ್ತಿದ್ರೆ ಚೆನ್ನಾಗಿತ್ತು ಎಂದು ಹೇಳಿದನು. “ಮೌಲಾನಾ ಕಶಾಫ್ ಅವರ ಇಡೀ ಕುಟುಂಬ ಮತ್ತು ಮೌಲಾನಾ ಮಸೂದ್ ಅಜರ್ ಅವರ ಹಿರಿಯ ಸಹೋದರಿ ಕೊಲ್ಲಲ್ಪಟ್ಟಿದ್ದಾರೆ ಮತ್ತು ಬಾಜಿ ಸಾದಿಯಾ ಅವರ ಪತಿ ಮುಫ್ತಿ ಅಬ್ದುಲ್ ರವೂಫ್ ಅವರ ಮೊಮ್ಮಕ್ಕಳು, ನಾಲ್ಕು ಮಕ್ಕಳು ಸೇರಿದಂತೆ ಹಿರಿಯ ಮಗಳು ಗಾಯಗೊಂಡಿದ್ದಾರೆ. ಹೆಚ್ಚಿನ ಮಹಿಳೆಯರು ಮತ್ತು ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ.ವೈಮಾನಿಕ ದಾಳಿಯಲ್ಲಿ ಮೃತಪಟ್ಟ ಅಜರ್ ಕುಟುಂಬ ಸದಸ್ಯರು ಮತ್ತು ಹತ್ತಿರದ ಸಂಬಂಧಿಕರ ಅಂತ್ಯಕ್ರಿಯೆ ಇಂದು ನಡೆಯಲಿದೆ.ವೈಮಾನಿಕ ದಾಳಿಯಲ್ಲಿ ಮಸೂದ್ ಅಜರ್ ಕುಟುಂಬದ 10 ಮಂದಿ ಸಾವನ್ನಪ್ಪಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

