Breaking News

ಮಡಿಕೇರಿ :ದೋಣಿ ಮಗುಚಿ ಇಬ್ಬರು ಯುವಕರು ನೀರುಪಾಲು!!

ದೋಣಿ ಮಗುಚಿದ ಪರಿಣಾಮ ಇಬ್ಬರು ಯುವಕರು ನೀರುಪಾಲಾದ ಘಟನೆ ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಕೂರುಳಿ ಬಳಿಯ ಕಡಿಯತ್ತೂರು ದೋಣಿ ಕಡವು ಗ್ರಾಮದ ಕಾವೇರಿ ನದಿಯಲ್ಲಿ ನಡೆದಿದೆ.ದುರ್ಘಟನೆಯಲ್ಲಿ ಭಾಗಮಂಡಲ ಸಮೀಪದ ಚೇರಂಬಾಣೆಯ ಪಾಕ ಗ್ರಾಮದ ಮುಕ್ಕಾಟಿ ವಿಠಲ ಎಂಬುವವರ ಪುತ್ರ ಅಯ್ಯಪ್ಪ (18)ಹಾಗೂ ಐವತ್ತೋಕ್ಲು ಗ್ರಾಮದ ಪರಮೇಶ್ ಎಂಬುವವರ ಪುತ್ರ ಗಿರೀಶ್ (16) ಸಾವನ್ನಪ್ಪಿರುವ ದುರ್ದೈವಿಗಳು.ಹೊಳೆಯಲ್ಲಿ ಮುಳುಗಿದ ಯುವಕರಿಗಾಗಿ ಶೋಧ ಕಾರ್ಯ ನಡೆಸಿದ ಸಂದರ್ಭ ಗಿರೀಶ್ ನ ಮೃತದೇಹ ಪತ್ತೆಯಾಗಿ ಹೊರತೆಗೆಯಲಾಗಿದೆ. ಅಯ್ಯಪ್ಪನ ಮೃತದೇಹದ ಪತ್ತೆಕಾರ್ಯ ಮುಂದುವರೆದಿದೆ.ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *