Breaking News

ಮನೆಗಳ ತೆರವು ವಿರೋಧಿಸಿ ಹುಬ್ಬಳ್ಳಿ ನಿವಾಸಿಗಳಿಂದ ಧಾರವಾಡದಲ್ಲಿ ಆಕ್ರೋಶ

ಧಾರವಾಡ : ಸರ್ಕಾರಿ ಬಯಲು ಹುಲ್ಲುಗಾವಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳ ಮನೆಗಳನ್ನು ತೆರವು ಮಾಡುತ್ತಿರುವ ನಡೆಯನ್ನು ವಿರೋಧಿಸಿ ಹಾಗೂ ಅಲ್ಲಿನ ನಿವಾಸಿಗಳಿಗೆ ಖಾಯಂ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ, ಹುಬ್ಬಳ್ಳಿ ಕೆಂಪಗೇರಿ ನಿವಾಸಿಗಳಿ ಧಾರವಾಡದಲ್ಲಿ ಪ್ರತಿಭಡನೆ ನಡೆಸಿ ಅಧಿಕಾರಿಗಳ ವಿರಿದ್ಧ ತಮ್ಮ ಆಕ್ರೋಶ ಹೊರಹಾಕಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹುಬ್ಬಳ್ಳಿ ಕೆಂಪಗೇರಿ ನಿವಾಸಿಗಳ ಸುಧಾರಣಾ ಸಮಿತಿ ಸದಸ್ಯರು ಸೇರಿದಂತೆ ನಿವಾಸಿಗಳು ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಸ್ಥಳೀಯ ಅಧಿಕಾರಿಗಳ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 40 ವರ್ಷಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು ಹುಬ್ಬಳ್ಳಿಯ ಕೆಂಪಗೇರಿಯ ಸರ್ಕಾರಿ ಬಯಲು ಹುಲ್ಲುಗಾವಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಏಕಾ ಏಕಿ ಅವರ ಮನೆಗಳನ್ನು ಮಹಾನಗರ ಪಾಲಿಕೆ ತೆರವು ಮಾಡುತ್ತಿದೆ, ಇದು ಖಂಡನೀಯವಾಗಿದೆ. ಈ ಕೂಡಲೇ ತೇರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಕೈಬೀಡಬೇಕು. ಜೊತೆಗೆ ಮನೆಗಳನ್ನು ಕಟ್ಟಿಕೊಂಡು ಇರುವ ಜನರಿಗೆ ಖಾಯಂ ಹಕ್ಕುಪತ್ರ ನೀಡಬೇಕು ಎಂದು ಅಗ್ರಹಿಸಿದರು. ಒಂದುವೇಳೆ ಅಧಿಕಾರಿಗಳು ಇದನ್ನು ಮೀರಿ ತೇರವು ಕಾರ್ಯಕ್ಕೆ ಮುಂದಾದಲ್ಲಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟಕ್ಕೆ ನಾವು ಮುಂದಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಇದೇವೇಳೆ ಎಚ್ಚರಿಕೆ ನೀಡಿದರು.

Share News

About BigTv News

Check Also

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಅರೆಸ್ಟ್, ₹3.45 ಲಕ್ಷದ ಚಿನ್ನಾಭರಣ ವಶ…

ಹಳೇಹುಬ್ಬಳ್ಳಿಯಲ್ಲಿ ಮನೆಗಳ್ಳರಿಗೆ ಖಾಕಿ ಶಾಕ್..! ಇಬ್ಬರು ಆರೋಪಿಗಳ ಬಂಧನ, ₹3.45 ಲಕ್ಷ ಮೌಲ್ಯದ ಚಿನ್ನಾಭರಣ ವಶ! ಹುಬ್ಬಳ್ಳಿ: ಮನೆಗೆ ಬೀಗ …

Leave a Reply

Your email address will not be published. Required fields are marked *