Breaking News

ಗೋಡೆ ಕೊರೆದು,ಬೆತ್ತಲೆಯಾಗಿ ಕಳ್ಳತನ ಮಾಡಿದ ಖತರ್ನಾಕ್ ಕಳ್ಳ..! CCTVಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳನ ಪ್ರಕರಣ ಬೆಳಕಿಗೆ ಬಂದಿದ್ದು,ಚಡ್ಡಿ ಗ್ಯಾಂಗ್,ಬೆಡ್ ಶೀಟ್ ಗ್ಯಾಂಗ್ ಆಯ್ತು ನಗರಕ್ಕೆ ಬೆತ್ತಲೆ ಗ್ಯಾಂಗ್ ಎಂಟ್ರಯಾಗಿಯಾ ಎಂಬ ಅನುಮಾನ ಕಾಡಿದೆ. ಐನಾತಿ ಕಳ್ಳನೊಬ್ಬ ಪೊಲೀಸರ ಯಾಮಾರಿಸಲು ಹೊಸ ದಾರಿ ಹುಡುಕಿದ್ದಾನೆ.ಬೊಮ್ಮನಹಳ್ಳಿಯಲ್ಲಿ ಕಳ್ಳನೊಬ್ಬ ಬೆತ್ತಲೆಯಾಗಿ ಬಂದು, ಗೋಡೆ ಕೊರೆದು ಕಳ್ಳತನ ಮಾಡಿರುವಂತ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬೆತ್ತಲೆಯಾಗಿ ಎಂಟ್ರಿ ಕೊಟ್ಟು ಕೃತ್ಯವೆಸಗಿ ಪರಾರಿಯಾಗಿದ್ದಾನೆ. ಮೊಬೈಲ್ ಶಾಪ್ ನುಗ್ಗಿ ಬರೋಬ್ಬರಿ 85 ಮೊಬೈಲ್ ಎಗರಿಸಿದ್ದಾನೆ.ದಿನೇಶ್ ಎಂಬುವವರ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್​ನಲ್ಲಿ ಕೃತ್ಯವೆಸಗಲಾಗಿದೆ. ಅನೇಕ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ಬಟ್ಟೆಯ ಜಾಡು ಹಿಡಿಯುತ್ತಾರೆ. ಹಾಗಾಗಿ ಪೊಲೀಸರಿಗೆ ಯಾಮಾರಿಸಲು ಬೆತ್ತಲೆಯಾಗಿ ಕಳ್ಳತನಕ್ಕಿಳಿದಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *