ಸಿಗರೇಟ್ ವಿಚಾರಕ್ಕೆ ಗಲಾಟೆ ನಡೆದು ಕಾರಿನಿಂದ ಗುದ್ದಿ ಯುವಕನನ್ನು ‘ಮರ್ಡರ್’ ಮಾಡಿರುವ ಘಟನೆ ಕೋಣನಕುಂಟೆ ಕ್ರಾಸ್,ಕನಕಪುರ ರಸ್ತೆ ತಿರುವಿನ ಬಳಿ ಜರುಗಿದೆ.ಗಲಾಟೆ ಜೋರಾಗಿ ಅಂಗಡಿಯವರು ಬಿಡಿಸಿ ಕಳುಹಿಸಿದ್ದರು. ಕೋಪಗೊಂಡ ಪ್ರತೀಕ್ ಕಾರಿನಲ್ಲಿ ಮುಂದೆ ಹೋಗಿ ರಸ್ತೆ ಪಕ್ಕದಲ್ಲೇ ನಿಲ್ಲಿಸಿಕೊಂಡಿದ್ದ. ಸಿಗರೇಟ್ ಸೇದಿ ಇಬ್ಬರೂ ಬೈಕ್‌ನಲ್ಲಿ ಮುಂದೆ ಬರುತ್ತಿದ್ದಂತೆ. ವೇಗವಾಗಿ ಬಂದು ಇಬ್ಬರು ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಪರಿಣಾಮ, ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿದ. ಕಾರ್ತಿಕ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಆರಂಭದಲ್ಲಿ ಇದು ಅಪಘಾತ ಎಂದು ತಿಳಿದಿದ್ದ ಪೊಲೀಸರಿಗೆ ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲನೆ ವೇಳೆ ಅಸಲಿ ವಿಚಾರ ಬಯಲಿಗೆ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

