Breaking News

ಬೆಂಗಳೂರು :ಲೇಡಿ ಕಾನ್‌ಸ್ಟೇಬಲ್‌ʼಗೆ ವಂಚಿಸಿ ಹಣ ವಸೂಲಿ ಮಾಡಿದ ಡೋಂಗಿ ಬಾಬಾ ಅರೆಸ್ಟ್.!

ಕಾನ್ಸ್‌ಟೇಬಲ್‌ಗೆ ಸ್ನೇಹಿತೆಯ ಮೂಲಕ ಆರೋಪಿ ಹೇಮಂತ್ ಭಟ್ ಪರಿಚಯವಾಗಿತ್ತು. ಜಾತಕ ಪರಿಶೀಲಿಸಿದ್ದ ಆರೋಪಿಯು ನಿನ್ನ ದೇಹದಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಹದಿನೈದು ಇತರೆ ಆತ್ಮಗಳು ಸೇರಿವೆ. ಆದ್ದರಿಂದಲೇ ಸಮಸ್ಯೆಯಾಗುತ್ತಿದೆ, ಇನ್ನೂ ನಿನಗೆ ಮದುವೆ ಸಹ ಆಗುತ್ತಿಲ್ಲ. ಶಾಂತಿ ಮಾಡಿಸದಿದ್ದರೆ ಪ್ರಾಣ ಹಾನಿಯಾಗುತ್ತದೆ ಎಂದು ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.ಹಂತಹಂತವಾಗಿ ಒಟ್ಟು 6.49 ಲಕ್ಷ ರೂ. ಹಣ ಪಡೆದುಕೊಂಡಿದ್ದಾನೆ. ಆದರೆ ಪೂಜೆಯ ಬಳಿಕವೂ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣದಿದ್ದಾಗ ಹಣ ವಾಪಸ್ ನೀಡುವಂತೆ ದೂರುದಾರೆ ಕೇಳಿದ್ದರು.ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಕಾನ್ಸ್‌ಟೇಬಲ್​ವೊಬ್ಬರ ಬಳಿ ಪೂಜೆ, ಆತ್ಮದ ಕಥೆ ಕಟ್ಟಿ ವಂಚಿಸಿದ ಆರೋಪದಡಿ ಕಲಬುರಗಿ ಮೂಲದ ಹೇಮಂತ್ ಭಟ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *