ನವದೆಹಲಿ: ಗೂಢಚಾರಿಕೆ ಉದ್ದೇಶಗಳಿಗಾಗಿ ಸಜ್ಜುಗೊಂಡ ಚೀನಾದ ಮಿಲಿಟರಿ ಹಡಗೊಂದು ಕೊಲಂಬೊ ಬಂದರಿನಲ್ಲಿ ಲಂಗರು ಹಾಕಿದ್ದು, ಭಾರತಕ್ಕೆ ಕಳವಳ ಮೂಡಿಸಿದೆ. ಸರಿಯಾಗಿ ಒಂದು ವರ್ಷದ ಹಿಂದೆ ಚೀನಾದ ಇಂಥದೇ ಹಡಗೊಂದು ಶ್ರೀಲಂಕಾ ಬಂದರಿನಲ್ಲಿ ಲಂಗರು ಹಾಕಿ ನಿಂತಿತ್ತು. ಈಗ ಅಂಥದೇ ಘಟನೆ ಮರುಕಳಿಸಿದೆ.
ಶ್ರೀಲಂಕಾ ನೌಕಾಪಡೆಯ ಪ್ರಕಾರ, ಪೀಪಲ್ಸ್ ಲಿಬರೇಶನ್ ಆರ್ಮಿ ನೌಕಾಪಡೆಯ ಹೈ ಯಾಂಗ್ 24 ಎಚ್ಎಒ (HAI YANG 24 HAO) ಹೆಸರಿನ ಯುದ್ಧನೌಕೆಯು ಗುರುವಾರ ಕೊಲಂಬೊ ಬಂದರಿಗೆ ಪ್ರವೇಶಿಸಿದೆ. ಈ ಹಡಗು ಶನಿವಾರ ಇಲ್ಲಿಂದ ನಿರ್ಗಮಿಸಲಿದೆ. “ಕೊಲಂಬೊಗೆ ಆಗಮಿಸಿರುವ 129 ಮೀಟರ್ ಉದ್ದದ ಹಡಗಿನಲ್ಲಿ 138 ಸಿಬ್ಬಂದಿ ಇದ್ದಾರೆ ಮತ್ತು ಅದನ್ನು ಕಮಾಂಡರ್ ಜಿನ್ ಕ್ಸಿನ್ ಮುನ್ನಡೆಸುತ್ತಿದ್ದಾರೆ. ಹಡಗು ನಾಳೆ ದೇಶವನ್ನು ತೊರೆಯಲಿದೆ” ಎಂದು ನೌಕಾಪಡೆಯ ಹೇಳಿಕೆ ತಿಳಿಸಿದೆ
ಚೀನಾದ ಹಡಗು ಲಂಕಾ ಬಂದರಿಗೆ ಆಗಮಿಸುವುದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಶ್ರೀಲಂಕಾ ಸರ್ಕಾರ ಚೀನಾ ಹಡಗಿಗೆ ಪರವಾನಿಗೆ ನೀಡಲು ತಡ ಮಾಡಿತ್ತು. ಆದಾಗ್ಯೂ ಚೀನಾ ಹಡಗು ತನ್ನ ದೇಶದ ಬಂದರಿಗೆ ಆಗಮಿಸಲು ಅನುಮತಿ ನೀಡಿದ ಶ್ರೀಲಂಕಾ ಈ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಸಮಜಾಯಿಷಿ ನೀಡಿದೆ. ಆದರೆ ಚೀನಾ ಹಡಗು ಆಗಮಿಸಿರುವ ಬಗ್ಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





