ಬೆಂಗಳೂರು : ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಈ ಬೆನ್ನಲ್ಲೇ ನಟ ಸುದೀಪ್ ವಿರುದ್ಧ ನಿರ್ಮಾಪಕ ಎನ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಫಿಲ್ಮ್ ಚೇಂಬರ್ ನಲ್ಲಿ ಸುದ್ದಿಗೋಷ್ಟಿ ನಡೆಸಿ, ಸುದೀಪ್ ಅವರು ಕೈಗೆ ಸಿಕ್ತಾ ಇಲ್ಲ. ಮುತ್ತತ್ತಿ ಸತ್ಯರಾಜ್ ಸಿನಿಮಾ ಮಾಡುವುದಕ್ಕೆ ಸಮಯ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ಧಾರೆ, ಫಿಲಂ ಚೇಂಬರ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಎನ್ ಕುಮಾರ್ ಮಾತನಾಡಿ ಸುದೀಪ್ ಜೊತೆಗೆ ಹಲವು ಸಿನಿಮಾ ಮಾಡಿದ್ದೀನಿ.

ಸ್ವಾತಿಮುತ್ತು, ವಿಷ್ಣುವರ್ಧನ್ ಸೇರಿದಂತೆ ವಿತರಣೆ ಮಾಡಿಕೊಂಡು ಬಂದಿದ್ದೀವಿ. ಆದ್ರೆ ಇತ್ತಿಚೆಗೆ ಅವರ ನನ್ನ ನಡುವೆ ಬಾಂಧವ್ಯ ಅದೇನಾಗಿದೆಯೋ ಏನೋ. ಸಿನಿಮಾ ಮಾಡೋಣಾ ಅಂತ ಹೇಳ್ತಾರೆ, ಕೈಗೆ ಸಿಕ್ತಾ ಇಲ್ಲ. ಕಳೆದ ಹಲವು ವರ್ಷಗಳಿಂದ ನಿಮ್ಮದೆ ಸಿನಿಮಾ ಮಾಡ್ತೀವಿ ಅಂತ ಹೇಳಿದ್ರು. ವಿಕ್ರಾಂತ್ ರೋಣ ಆದ್ಮೇಲೆ ನಿಮ್ಮದೇ ಸಿನಿಮಾ ಮಾಡೋಣಾ ಅಂತ ಹೇಳಿದ್ರು. ಆದ್ರೆ ರೆಸ್ಪಾನ್ಸ್ ಮಾಡ್ತಿಲ್ಲ. ವಾಣಿಜ್ಯ ಮಂಡಳಿಗೆ ಸಾಕಷ್ಟು ಸಲ ಪತ್ರ ಬರೆದಿದ್ದೀವಿ. ಎಲ್ಲಾ ನಾಯಕರ ಜೊತೆಗೆ ಸಿನಿಮಾ ಮಾಡಿದ್ದೀವಿ. ವ್ಯಾಪಾರದಲ್ಲಿ ಏಳು ಬೀಳು ಇರುತ್ತೆ. ಒಂದು ಕಮಿಟ್ಮೆಂಟ್ ಇರಬೇಕು ಅಲ್ವಾ.
ರಂಗ SSLC ಮಾಡುವಾಗ ಒಬ್ಬರಿಗೆ ಹಣ ಕೊಡಬೇಕಿತ್ತು. ಅವರು ಬಂದು ಮನೆ ಬಾಗಿಲಲ್ಲಿ ನಿಂತಿದ್ದರು. ಆಗ ಹಣ ಕೊಟ್ಟಿದ್ದು ಯಾರು ಅಂತ ಜ್ಯಾಕ್ ಮಂಜುನಾ ಕೇಳಿ. ಆ ಹೀರೋ ಬೇಕು ನಮಗೆ ಅಂತ ನಂಬಿಕೆಯಿಂದ ಹಣ ಕೊಟ್ಟಿರ್ತೀವಿ. 8 ವರ್ಷದ ಹಿಂದೆ ನಡೆದಿದ್ದು. ಮಧ್ಯದಲ್ಲಿ ಕೊರೋನಾ ಬಂತು ನಾವೂ ಸುಮ್ನೆ ಆಗಿದ್ವಿ. ವಿಕ್ರಾಂತ್ ರೋಣ ಶುರು ಆದ್ಮೇಲೆ ಮಾಡಣಾ ಅಂದ್ರು. ಆದ್ರೆ ರೆಸ್ಪಾನ್ಸ್ ಇಲ್ಲ. ಈಗ ನಮ್ಮ ಕೈಗೆ ಸಿಗಲ್ಲ. ಮದ್ರಾಸ್ ನಲ್ಲಿ ಒಂದು ಸಿನಿಮಾ ಮಾಡೋದಕ್ಕೆ ಹೊರಟಿದ್ದಾರೆ. ಅವರ ಮಿಸ್ಸೆಸ್ ಗೂ ವಾಯ್ಸ್ ಮೆಸೇಜ್ ಕಳ್ಸಿದ್ದೀನಿ. ಆದ್ರೆ ಸುದೀಪ್ ಅವರು ಯಾವುದೇ ರೆಸ್ಪಾನ್ಸ್ ಮಾಡ್ತಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





