ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಕೋರ್ಟ್ ನಲ್ಲಿ ಡ್ರೈವರ್ ಕಾರ್ತಿಕ್ ಸಾಕ್ಷಿ ನುಡಿದಿದ್ದಾನೆ. ಅಶ್ಲೀಲ ದೃಶ್ಯಾವಳಿ ಸಿಕ್ಕಿದ್ದು ಹೇಗೆ ಎಂಬ ಮಾಹಿತಿಯನ್ನು ಕಾರ್ತಿಕ್ ಕೋರ್ಟ್ ನಲ್ಲಿ ಸಾಕ್ಷಿ ನುಡಿದಿದ್ದಾನೆ.ವಿಡಿಯೋ ಬಗ್ಗೆ ತಿಳಿಸಿದ್ದು ಯಾರೆಂದು ಕೇಳಿದಾಗ ಅವರು ನನ್ನ ಹೆಸರು ಹೇಳಿದರು. ಪ್ರಜ್ವಲ್ ನನಗೆ ಆಗ ಬೈದರು. ನಮ್ಮ ನಡುವೆ ಜಗಳವಾಗಿ 2022 ರಲ್ಲಿ ನಾನು ಕೆಲಸ ಬಿಟ್ಟೆ, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕೇಸ್ ಕೂಡ ಹಾಕಿದ್ದೆ. ಆಸ್ತಿ ವಿವಾದ ಬಗೆಹರಿಸುತ್ತೇನೆ ಕೆಲಸಕ್ಕೆ ಬರುವಂತೆ ಕರೆದಿದ್ದರು. ಆದರೆ ವಿಡಿಯೋ ಬಹಿರಂಗಪಡಿಸಿದಂತೆ ತಡೆಯಾಜ್ಞೆ ತಂದರು.ನನ್ನನ್ನು ಪ್ರತಿವಾದಿ ಮಾಡಿದ್ದರಿಂದ ವಕೀಲ ದೇವರಾಜೇಗೌಡರನ್ನು ಸಂಪರ್ಕಿಸಿದೆ.ಅವರು ಸಾಕ್ಷಿಯಾಗಿ ಫೋಟೋಗಳನ್ನು ನೀಡುವಂತೆ ಸೂಚಿಸಿದ್ದರಿಂದ ನಾನು ಅವರಿಗೆ ಪೆನ್ ಡ್ರೈವ್ ನಲ್ಲಿ ಎಲ್ಲ ಫೋಟೋ ವಿಡಿಯೋಗಳನ್ನು ನೀಡಿದೆ. ಲೋಕಸಭೆ ಚುನಾವಣೆಯ ವೇಳೆ ಈ ಫೋಟೋ ವಿಡಿಯೋಗಳು ಬಹಿರಂಗಗೊಂಡವು ಎಂದು ಡ್ರೈವರ್ ಕಾರ್ತೀಕ ಸಾಕ್ಷಿ ಹೇಳಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

