ಗಂಗಾವತಿ ನಗರದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗುಸುತ್ತಿದ್ದ 1.8 ಕೆ.ಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.ಒಟ್ಟು ಎಂಟು ಜನರ ವಿರುದ್ಧ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಬಂಧಿತ ಆರೋಪಿಗಳನ್ನು ಸೌಜೇಶ ಕೆ.ಕೆ.(28), ಸಲಿಂ ಪಿ.ಪಿ.(27) , ಬಿ.ದುರ್ಗಾ ಪ್ರಸಾದ್(27), ಬಾದ್ ಷಾ(32), ಮದನ್(26), ಸೂರ್ಯ ಪ್ರತಾಪ್ ರೆಡ್ಡಿ(19), ಮುಹಮ್ಮದ್ ಹಮೀದ್(22), ಮಣಿಕಂಠ(23) ಎಂದು ಗುರುತಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

