Breaking News

ಹುಬ್ಬಳ್ಳಿಯಿಂದ-ಶಬರಿಮಲೆಗೆ ಇಂದಿನಿಂದ ವಿಶೇಷ ರೈಲು ವ್ಯವಸ್ಥೆ…

ಹುಬ್ಬಳ್ಳಿ: ಹುಬ್ಬಳ್ಳಿಯಿಂದ-ಶಬರಿಮಲೆಗೆ ಇಂದಿನಿಂದ ವಿಶೇಷ ರೈಲು ವ್ಯವಸ್ಥೆ ಮಾಡಿದ್ದು, ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಮಾಲಾಧಾರಿಗಳು ಪೂಜೆ ಸಲ್ಲಿಸಿದರು. ರೈಲಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಕಬ್ಬು, ಬಾಳೆ ಗಿಡ, ಹೂವು ಕಟ್ಟಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ರೈಲಿಗೆ ಪೂಜೆ ಸಲ್ಲಿಸಿದರು. ಶಬರಿಮಲೆ ಯಾತ್ರಿಕರ ದಟ್ಟಣೆ ಪರಿಗಣಿಸಿ ನೈರುತ್ಯ ರೈಲ್ವೆಯು ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗವಾಗಿ ಕೇರಳದ ಕೊಟ್ಟಾಯಂಗೆ 2 ವಿಶೇಷ ರೈಲುಗಳನ್ನು ಆರಂಭಿಸಿದ್ದರಿಂದ ಅನುಕೂಲ ಆಗಿದೆ‌‌ ಎಂದು ಭಕ್ತರು ಸಂತಸ ವ್ಯಕ್ತಪಡಿಸುತ್ತಾರೆ. ಈ ವರ್ಷದ ಶಬರಿಮಲೆ ಮಂಡಲ ದರ್ಶನ ಆರಂಭವಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಕರ್ನಾಟಕದಿಂದ ತೆರಳುತ್ತಿದ್ದಾರೆ. ಭಕ್ತಾಧಿಗಳ ಅನುಕೂಲಕ್ಕಾಗಿ ರೈಲು ವ್ಯವಸ್ಥೆ ಮಾಡಲಾಗಿದೆ. ಈ ರೈಲಿನಲ್ಲಿ ತೆರಳುವ ಪ್ರಯಾಣಿಕರು ಕಡೆಯ ನಿಲ್ದಾಣದ ಕೇಳದ ಕೊಟ್ಟಾಯಂಗೆ ಇಳಿದು ಅಲ್ಲಿಂದ 97 ಕಿಲೋ ಮೀಟರ್‌ ದೂರದ ಶಬರಿಮಲೆಗೆ ತಲುಪಲಾಗುವುದು. ಹುಬ್ಬಳ್ಳಿ-ಕೊಟ್ಟಾಯಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌ (07305) ಡಿಸೆಂಬರ್‌ 2ರಿಂದ ಜನವರಿ 20ವರೆಗೆ ಸಂಚಾರ ನಡೆಸಲಿವೆ.

Share News

About BigTv News

Check Also

ಧಾರವಾಡನಲ್ಲಿ ಪ್ರತಿಭಟನೆಯ ಬೆನ್ನಲ್ಲೇ 24 ಸಾವಿರ ಹುದ್ದೆಗಳಿಗೆ ಮಂಜೂರಾತಿ…

ಬೆಂಗಳೂರು : ಕರ್ನಾಟಕದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ Dharwadನಲ್ಲಿ ಯುವಕರ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ರಾಜ್ಯ …

Leave a Reply

Your email address will not be published. Required fields are marked *