ಪಂಚಾಯಿತಿಯಾದ ಕೆಲ ದಿನಗಳ ಬಳಿಕ ಚೈತ್ರಾ, ಅದೇ ಗ್ರಾಮದ ಶಿವು ಎಂಬಾತನೊಂದಿಗೆ ಮತ್ತೊಂದು ಅನೈತಿಕ ಸಂಬಂಧ ಹೊಂದಿದ್ದಾಳೆ. ಈ ವಿಷಯ ಕುಟುಂಬಸ್ಥರಿಗೆ ತಿಳಿಯುವ ಮೊದಲೇ, ತನ್ನ ಸಂಬಂಧಕ್ಕೆ ಪತಿ, ಮಕ್ಕಳು ಹಾಗೂ ಅತ್ತೆ-ಮಾವ ಅಡ್ಡಿಯಾಗಬಹುದೆಂದು, ಎಲ್ಲರನ್ನೂ ಸಾಮೂಹಿಕವಾಗಿ ಕೊಲೆ ಮಾಡಲು ಯೋಜನೆ ರೂಪಿಸಿದ್ದಳು. ಶಿವು ಸಹಕಾರದೊಂದಿಗೆ, ಚೈತ್ರಾ ಊಟ, ತಿಂಡಿಗಳಲ್ಲಿ ವಿಷಕಾರಿ ಮಾತ್ರೆಗಳನ್ನು ಬೆರೆಸುತ್ತಿದ್ದಳು. ಕುಟುಂಬಸ್ಥರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ವಿಷಪ್ರಾಶನ ಮಾಡಿರುವ ಕೃತ್ಯ ಗೊತ್ತಾಗಿದೆ.ಈ ಬಗ್ಗೆ ಮಹಿಳೆಯ ಪತಿ ಗಜೇಂದ್ರ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬೇಲೂರು ಪೊಲೀಸರು ಚೈತ್ರಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಿವು ವಿರುದ್ಧವೂ ಪೊಲೀಸ್ ತನಿಖೆ ಆರಂಭವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

