ದಾವಣಗೆರೆ: ತುಂಗಾಭದ್ರಾ ನದಿಯಲ್ಲಿ ಹೆಚ್ಚಿದ ನೀರಿನ ಮಟ್ಟ ಹೆಚ್ಚಿರುವದರಿಂದ ಹೊನ್ನಾಳಿ ಹರಿಹರ ಹರಪನಹಳ್ಳಿ ತಾಲ್ಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ.ಹೊನ್ನಾಳಿ ಪಟ್ಟಣದ ಸಮೀಪ ನೀರಿನ ಮಟ್ಟ10.26 ಮೀಟರ್ ತಲುಪಿದೆ.ಅಪಾಯದ ಮಟ್ಟ 12 ಮೀಟರ್ ಮೀರಿದ್ರೆ ಹೊನ್ನಾಳಿ ಪಟ್ಟಣಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ.ಹೊನ್ನಾಳಿ ಬಾಲ್ ರಾಜ್ ಘಾಟ್ ನ 59 ಜನರಿಗೆ ಗಂಜಿಕೇಂದ್ರ ಸ್ಥಾಪನೆ ಮಾಡಲಾಗಿದೆ. ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಕ್ಷೇತ್ರದ ದೇವಾಲಯದ ಸ್ನಾನಘಟ್ಟಗಳು ನದಿ ನೀರಿನಲ್ಲಿ ಮುಳುಗಡೆಯಾಗಿದೆ. ಉಕ್ಕಡಗಾತ್ರಿ ಪತ್ಯಾಪುರ ಮಾರ್ಗದ ಸೇತುವೆ ಬಂದ್ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ದ್ವೀಪದಂತಾದ ಉಕ್ಕಡಗಾತ್ರಿ ಉಕ್ಕಡಗಾತ್ರಿ ಸುತ್ತಮುತ್ತಾ ನೂರಾರು ಎಕರೆ ಬೆಳೆ ಮುಳುಗಡೆಗೊಂಡಿದೆ.ಹರಿಹರ ತಾಲ್ಲೂಕಿನ ಸಾರಥಿ ಚಿಕ್ಕಬಿದರೆ ರಸ್ತೆ ಸಂಪರ್ಕವೂ ಸಹ ಕಡಿತಗೊಂಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





