Breaking News

ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನ!!

ಅಹಮದಾಬಾದ್ ನಿಂದ ಲಂಡನ್‌ಗೆ ಪ್ರಯಾಣಿಸುತ್ತಿದ್ದ ಈ ಏರ್ ಇಂಡಿಯಾ ವಿಮಾನವು ಮಧ್ಯಾಹ್ನ 1:38 ಕ್ಕೆ ಟೇಕ್ ಆಫ್ ಆಯಿತು. ಮೇಘನಿ ನಗರ ಪ್ರದೇಶದಲ್ಲಿ ಮೇಲೆ ಸರಿಯಾಗಿ ಅಪಘಾತಕ್ಕೀಡಾಯಿತು. ರನ್ ವೇ ನಿಂದ ಟೇಕ್ ಆಫ್ ಆದ 10 ನಿಮಿಷಗಳಲ್ಲಿ ಈ ಘಟನೆ ನಡೆದಿದೆ..ದುರಂತದ ಮುನ್ಸೂಚನೆ ಅರಿತ ವಿಮಾನದ ಪೈಲಟ್ ATC ಗೆ ಸಂದೇಶ Mayday Mayday ಸಂದೇಶವನ್ನು ಕಳುಹಿಸಿದ್ದರು. Mayday ಎಂಬುವುದರ ಅರ್ಥ.. ನಾವು ಅಪಘಾತಕ್ಕೀಡಾಗುತ್ತಿದ್ದೇವೆ, ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರೂ ಸಾಧ್ಯವಾಗುತ್ತಿಲ್ಲ. ನಮಗೆ ಬೇರೆ ದಾರಿ ಉಳಿದಿಲ್ಲ.. ಎಂದು ಪೈಲಟ್ ATC ಗೆ ತಿಳಿಸಿದರು.ಘಟನೆಯಿಂದ ಸ್ಥಳೀಯ ಪ್ರದೇಶದ ಜನರಲ್ಲಿ ಭಯ ಮೂಡಿದೆ. ಇದುವರೆಗೆ 130 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.169 ಭಾರತೀಯರು, 53 ಬ್ರಿಟಿಷರು ಮತ್ತು 7 ಪೋರ್ಚುಗೀಸರು, 11 ಮಕ್ಕಳು ಈ ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಮೇಘಾನಿ ನಗರದ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳ ಜೀವ ಮತ್ತು ಆಸ್ತಿ ನಷ್ಟದ ಸಾಧ್ಯತೆಯಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *