ಮಹಿಳೆಯೊಬ್ಬಳು ತನ್ನ ಪತಿ ಮತ್ತು ಎರಡನೇ ಪ್ರೇಮಿಯೊಂದಿಗೆ ಸೇರಿಕೊಂಡು ಮೊದಲನೇ ಪ್ರಿಯತಮನನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಮಧುಚಂದ್ರಕ್ಕೆಂದು ಕರೆದೊಯ್ದು ನವವಿವಾಹಿತೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಕೊಂದ ಸುದ್ದಿಯ ಆಘಾತದಿಂದ ಜನರು ಚೇತರಿಸುವ ಮುನ್ನವೇ, ರಹೀಮಾಬಾದ್‌ನಲ್ಲಿ ಮತ್ತೊಂದು ಭಯಾನಕ ಹತ್ಯೆ ನಡೆದಿದೆ.ಕುಂತಿ, ತನ್ನ ಪತಿ ರಾಂಭಜನ್ ಮತ್ತು ಎರಡನೇ ಪ್ರೇಮಿ ಜಬ್ಬಾರ್ ಜೊತೆಗೆ ಸೇರಿಕೊಂಡು ಗಪ್ಪುವನ್ನು ಕೊಲೆಗೈದಳು. ಆರೋಪಿಗಳು ಗಪ್ಪುವಿನ ಕತ್ತು ಸೀಳಿ ಕೊಂದು, ಶವವನ್ನು ಆತನ ಮನೆಯ ಹತ್ತಿರ ಎಸೆದಿದ್ದಾರೆ.ಪೊಲೀಸರ ತನಿಖೆಯಲ್ಲಿ ಕುಂತಿಯ ಈ ದುಷ್ಕೃತ್ಯ ಬಯಲಾಗಿದೆ. ಆಕೆಯ ವಂಚನೆಯ ಜಾಲ ಮತ್ತು ಇಬ್ಬರು ಪುರುಷರೊಂದಿಗಿನ ಸಂಬಂಧವು ಕೊಲೆಗೆ ಕಾರಣವಾಯಿತು. ಬಂಧಿತ ಆರೋಪಿಗಳ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

