Breaking News

ಸ್ನೇಹಿತನಿಗೆ ಕಂಠಪೂರ್ತಿ ಕುಡಿಸಿ ರಾಬರಿ ಮಾಡಿಸಿದ ಸ್ನೇಹಿತರು!!

ಚಂದನ್, ಪವನ್ ಹಾಗೂ ಅಚಲ್ ಮೂವರು ಸ್ನೇಹಿತರು. ಕಳೆದ ತಿಂಗಳು ಮೂವರು ಚಿಕ್ಕಜಾಲದ ನೆಕ್ಸ್ಟ್ ಚಾಪ್ಟರ್ ಪಬ್​​ಗೆ ಹೋಗುತ್ತಾರೆ. ಈ ವೇಳೆ ಚಂದನ್​ಗೆ ಉಳಿದಿಬ್ಬರು ಸ್ನೇಹಿತರು ಕಂಠಪೂರ್ತಿ‌ ಕುಡಿಸುತ್ತಾರೆ. ನಂತರ ಪವನ್ ಹಾಗೂ ಅಚಲ್, ಚಂದನ್​​ ನನ್ನು ಕಾರಿನತ್ತ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅಚಲ್ ಜೆಪಿ ನಗರದ ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್​​ಗೆ ಫೋನ್ ಮಾಡಿ ಕರೆಸಿಕೊಳ್ಳುತ್ತಾನೆ. ಸ್ಥಳಕ್ಕೆ ಬಂದ ಗ್ಯಾಂಗ್​​ ಚಂದನ್​​ಗೆ ಹಿಗ್ಗಾಮುಗ್ಗು ಥಳಿಸಿ ಆತನ ಬಳಿಯಿದ್ದ ಚಿನ್ನಾಭರಣ ದೋಚಿದ್ದಾರೆ.ರಾಬರಿ ಮಾಡಿಸಿದ ಸ್ನೇಹಿತರೇ ಪೊಲೀಸ್​ ಠಾಣೆಗೆ ಹೋಗಿ ದೂರು ಕೊಡಿಸಿದ್ದಾರೆ. ಆದರೆ ಈ ಸ್ನೇಹಿತರ ವರ್ತನೆಯಿಂದ ಅನುಮಾನಗೊಂಡ ಪೊಲೀಸರು, ಕಾಲ್ ಲಿಸ್ಟ್​ ತೆಗೆದು ನೋಡಿದಾಗ ಸಿಕ್ಕಿಬಿದಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *