Breaking News

ಶಾರುಖ್ ಖಾನ್ ಮನೆ ಮೇಲೆ ಅನುಮಾನ, ಭೇಟಿ ನೀಡಿದ ಅಧಿಕಾರಿಗಳು!!

ಮುಂಬೈನ ಅತ್ಯಂತ ದುಬಾರಿ ಮನೆಗಳಲ್ಲಿ ಶಾರುಖ್ ಖಾನ್ ಅವರ ಮನ್ನತ್ ಸಹ ಸೇರುತ್ತದೆ. ಮನ್ನತ್ ಮನೆಯ ಮುಂದೆ ಯಾವಾಗಲೂ ಅಭಿಮಾನಿಗಳು, ಪ್ರವಾಸಿಗರು ಹಾಜರಿರುತ್ತಾರೆ. ಅವರ ಮನೆ ನೋಡಲು ಬರುವವರಿಗೆಂದು ಮಾರುಕಟ್ಟೆಯೇ ತೆರೆದಿದೆ.ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತನೋರ್ವ, ಶಾರುಖ್ ಖಾನ್ ಅವರು ಕೋಸ್ಟಲ್ ರೆಗ್ಯೂಲೇಷನ್ ಜೋನ್ ನಿಯಮಗಳನ್ನು ಉಲ್ಲಂಘಿಸಿ ಶಾರುಖ್ ಖಾನ್ ತಮ್ಮ ಮನೆಯ ನವೀಕರಣ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು.ಶಾರುಖ್ ಖಾನ್ ಒಡೆತನದ ಮನ್ನತ್ ಮನೆಗೆ ಭೇಟಿ ನೀಡಿ, ನವೀಕರಣ ಕಾರ್ಯವನ್ನು ಕೂಲಂಕುಶವಾಗಿ ಪರಿಶೀಲನೆ ನಡೆಸಿದರು.ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಶಾರುಖ್ ಖಾನ್ ಅವರ ಸಿಬ್ಬಂದಿ, ಅಧಿಕಾರಿಗಳಿಗೆ ತಾವು ಬಿಎಂಸಿ ಹಾಗೂ ಇತರೆ ಇಲಾಖೆಗಳಿಂದ ಪಡೆದುಕೊಂಡಿರುವ ಪರವಾನಗಿಗಳನ್ನು, ಒಪ್ಪಿಗೆಗಳನ್ನು ತೋರಿಸಿ, ನವೀಕರಣದ ನಕ್ಷೆಯನ್ನು ತೋರಿಸಿದ್ದಾರೆ. ನಿಯಮಬಾಹಿರವಾಗಿ ಯಾವುದೇ ಕಾಮಗಾರಿಯನ್ನು ತಾವು ಮಾಡುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Share News

About BigTv News

Check Also

ವಿಜಯಪುರದಲ್ಲಿ ಮತ್ತೆ ಹರಿದ ನೆತ್ತರು, ಪತ್ನಿಯ ಎದುರಲ್ಲೇ ಅಮಾನುಷವಾಗಿ ಪತಿಯ ಜೀವ ತೆಗೆದ ರಾಕ್ಷಸರು

ವಿಜಯಪುರ: ನಗರದ ಮುಂಡೆವಾಡಿ ಆಸ್ಪತ್ರೆ ಎದುರು ಯಾಸೀನ್ ಠಕ್ಕೆ ಎಂಬಾತನ ಮೇಲೆ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಹತ್ಯೆ …

Leave a Reply

Your email address will not be published. Required fields are marked *