Breaking News

ಶಿವಮೊಗ್ಗ : ಕುಡಿದ ಮತ್ತಿನಲ್ಲಿ ಕೃಷಿಹೊಂಡಕ್ಕೆ ಬಿದ್ದು ಯುವಕರು ಸಾವು!!

ಯಡವಾಲ ಗ್ರಾಮದ ಸ್ನೇಹಿತನ ತಂಗಿಯ ಮಗು ನೋಡಲೆಂದು 10 ಜನ ಯುವಕರು ತೆರಳಿದ್ದರು.ಮಗುವನ್ನು ನೋಡಿದ ಬಳಿಕ ತೋಟದಲ್ಲಿ ಪಾರ್ಟಿ ಮಾಡಲೆಂದು ಹೋಗಿದ್ದಾರೆ. ಕುಡಿದ ಮತ್ತಿನಲ್ಲಿ ಸ್ನೇಹಿತನೋರ್ವ ಕೃಷಿಹೊಂಡದ ಬಳಿ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ಮತ್ತೋರ್ವ ಸ್ನೇಹಿತ ರಕ್ಷಣೆಗೆ ಧಾವಿಸಿದ್ದಾನೆ.ಆದರೆ ಈ ವೇಳೆ ಆತ ಕೂಡ ನೀರಿನಲ್ಲಿ ಮುಳುಗಿದ್ದಾನೆ. ಸದ್ಯ ಯುವಕರ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Share News

About BigTv News

Check Also

ಡೇಟಿಂಗ್ ಆಯಪ್ ಗೆಳತಿಯನ್ನು ಮನೆಗೆ ಕರೆದ ಯುವಕ – ಆದರೆ ಬಂದವರೇ ಬೇರೆ!

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯೆಂದು ಪರಿಚಯಿಸಿಕೊಂಡ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಿದ ಯುವಕನಿಗೆ ಚಾಕು ತೋರಿಸಿ ಬೆದರಿಸಿ, …

Leave a Reply

Your email address will not be published. Required fields are marked *