ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ಬ್ರ್ಯಾಂಡ್ ಬಟ್ಟೆ ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿದ್ಧಾಪುರ ಪೊಲೀಸರು ದಾಳಿ ಮಾಡಿದ್ದಾರೆ.ಅವಿನಾಶ್ ಎಂಬುವವರು ಸಿದ್ದಾಪುರದ ಭೈರಸಂದ್ರದಲ್ಲಿ ನಕಲಿ ಬಟ್ಟೆ ಗೋಡೌನ್ ಹೊಂದಿದ್ದರು. ದೆಹಲಿಯಿಂದ ನಕಲಿ ಬ್ರಾಂಡೆಂಡ್ ಬಟ್ಟೆ ತರಿಸಿ ಬೆಂಗಳೂರಿಗೆ ಸರಬರಾಜು ಮಾಡ್ತಿದ್ದ. ನೈಕಿ ಪೂಮಾ ಸಂಸ್ಥೆ ಪ್ರತಿನಿಧಿ ಶ್ರೀಜಿತ್ ಎಂಬುವವರು ನೀಡಿದ ದೂರಿನನ್ವಯ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಲಕ್ಷಾಂತರ ಮೌಲ್ಯದ ಪೂಮಾ ನೈಕಿ ಬ್ರಾಂಡ್ ನ ನಕಲಿ ಸ್ಫೊರ್ಟ್ಸ್ ವೇರ್, ಟ್ರಾಕ್ ಪ್ಯಾಂಟ್, ಟೀ ಶರ್ಟ್ಸ್, ಒಳ ಉಡುಪು ಪತ್ತೆಯಾಗಿದೆ.ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಾಫಿ ರೈಟ್ಸ್ ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

