Breaking News

ಭಾರತ ಜೋಡೊ ಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಓಡಿದ ರಾಗಾ


ಜಡೇಚರ್ಲ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಅಖಿಲ ಭಾರತ ಮಟ್ಟದ ಐಕ್ಯತಾ ಯಾತ್ರೆ ತೆಲಂಗಾಣ ರಾಜ್ಯದಲ್ಲಿಂದು 5ನೇ ದಿನಕ್ಕೆ ಕಾಲಿಟ್ಟಿದ್ದು, ಓಟದ ಸ್ಪರ್ಧೆಯಾಗಿ ಪರಿವರ್ತನೆಯಾಗಿತ್ತು. ಇಂದಿನ ಪಾದಯಾತ್ರೆಯಲ್ಲಿ ಸುಮಾರು 22 ಕಿ.ಮೀ ಸಂಚರಿಸುವ ಮಾರ್ಗ ನಕ್ಷೆ ಸಿದ್ದಗೊಂಡಿತ್ತು.ಎಂದಿನಂತೆ ಬೆಳಗ್ಗೆ ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಿದರು.

ಭದ್ರತಾ ಸಿಬ್ಬಂದಿಗಳು, ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ಮುಂದೆ ಹೆಜ್ಜೆ ಹಾಕುತ್ತಿದ್ದರು. ಒಂದು ಹಂತದಲ್ಲಿ ಮಕ್ಕಳು ಜೊತೆಗೂಡಿದರು. ಈ ಹಂತದಲ್ಲಿ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಓಡಲಾರಂಭಿಸಿದರು. ಇದು ಕಾಂಗ್ರೆಸ್ ನಾಯಕರು ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಏದುಸಿರು ಬಿಡುವಂತೆ ಮಾಡಿತ್ತು.

ಕಾಲ್ನಡಿಗೆ ಜಾಥಾ ಏಕಾಏಕಿ ಓಟದ ಸ್ಪರ್ಧೆಯಾಗಿ ಮಾರ್ಪಟ್ಟಿದ್ದರಿಂದ ರಾಹುಲ್ ಗಾಂಧಿ ಅವರಿಗೆ ಸಮನಾಗಿ ಓಡಲಾಗದೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಹಾಗೂ ಇತರರು ವೇಗದ ನಡಿಗೆ ಮೂಲಕ ಮುಂದೆ ಸಾಗಿದ್ದ ರಾಹುಲ್‍ರನ್ನು ಕೂಡಿಕೊಳ್ಳುವ ಪ್ರಯತ್ನ ಮಾಡಿದರು. ಭದ್ರತಾ ಸಿಬ್ಬಂದಿಗಳು ಕೂಡ ಸ್ವಲ್ಪ ದೂರ ಓಡಿ ಏದುಸಿರು ಬಿಟ್ಟರು.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *