Breaking News

ಪಾರಿಜಾತ ಲಾಡ್ಜನಲ್ಲಿ ವೇಶಾವಾಟಿಕೆ ದಂಧೆ: ಮೈಸೂರಿನ ಸಂಸ್ಥೆಯ ಮಾಹಿತಿ ಮೇಲೆ ದಾಳಿ ನಡೆಸಿದ ಸಿಸಿಬಿ…

ಮಾಂಸ ದಂಧೆಯಲ್ಲಿ ಹುಬ್ಬಳ್ಳಿಯ ಪಾರಿಜಾತ ಲಾಡ್ಜ್…

ಪಾರಿಜಾತದ ಪರಿಮಳ ಮೈಸೂರಿಗೆ ತಲುಪಿದೆ..

ಹುಬ್ಬಳ್ಳಿ: ವೇಶಾವಾಟಿಕೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಹುಬ್ಬಳ್ಳಿಯ ಹೊಸೂರಿನ ಪಾರಿಜಾತ ಲಾಡ್ಜ್ ಮೇಲೆ ದಾಳಿ ನಡೆಸಿ ಅಂತರರಾಜ್ಯದ ಐವರು ಮಹಿಳೆಯರು ಹಾಗೂ ಏಳು ಜನ ಪುರುಷರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ…

ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳೀಯ ಸಿಸಿಬಿ ಪೊಲೀಸರ ದಾಳಿ ನಡೆಸಿದ್ದು, ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಪಶ್ಚಿಮ ಬಂಗಾಳದ ಓರ್ವ ಯುವತಿ ಸೇರಿದಂತೆ ಐದು ಜನ ಯುವತಿಯರು,ಏಳು ಜನ ಪುರುಷರು ಬಂಧಿಸಲಾಗಿದೆ.ಇನ್ನೂ ದಾಳಿಯ ವೇಳೆ ಶೌಚಾಲಯದಲ್ಲಿ ಗುಪ್ತ ಬಾಗಿಲು ಪತ್ತೆಯಾಗಿದೆ. ಯಾರಾದರೂ ಬಂದರೆ ತಪ್ಪಿಸಿಕೊಳ್ಳಲು ಪತ್ತೆಯಾದ ಗುಪ್ತ ಸ್ಥಳ ಕೂಡ ನಿರ್ಮಾಣ ಮಾಡಲಾಗಿದೆ. ಒಡನಾಡಿ ಸಂಸ್ಥೆಯ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಹುಬ್ಬಳ್ಳಿಯ ಹೊಸೂರಿನಲ್ಲಿರುವ ಪಾರಿಜಾತ ಲಾಡ್ಜ್ ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share News

About Shaikh BigTv

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *