ಮಧ್ಯರಾತ್ರಿ ಪ್ರಮಾಣ ವಚನ ಸ್ವೀಕರಿಸಿದ ಗೋವಾ ಸಿಎಂ ಪ್ರಮೋದ್ ಸಾವಂತ್..

ಪಣಜಿ, ಮಾರ್ಚ್ 19: ಗೋವಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಪ್ರಮೋದ್ ಸಾವಂತ್ ಅವರು ಮಂಗಳವಾರ ಮಧ್ಯರಾತ್ರಿ ಪ್ರಮಾಣವಚನ ಸ್ವೀಕರಿಸಿದರು.ಮನೋಹರ್ ಪರಿಕ್ಕರ್ ಅವರ ಅಗಲಿಕೆಯ ಶೋಕದ ನಡುವೆಯೇ ಕೂಡಲೇ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಬಿಜೆಪಿ ಸಿಲುಕಿತ್ತು. ತ್ವರಿತ ರಾಜಕೀಯ ಬೆಳವಣಿಗೆಯಲ್ಲಿ ಪ್ರಮೋದ್ ಸಾವಂತ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿತ್ತು.ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ಮಂಗಳವಾರ ನಸುಕಿನ 2 ಗಂಟೆಗೆ ನಡೆದ ಸಮಾರಂಭದಲ್ಲಿ ಪ್ರಮೋದ್ ಸಾವಂತ್ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜ್ಯಪಾಲರಾದ ಮೃದುಲಾ ಸಿನ್ಹಾ ಪ್ರಮಾಣವಚನ ಬೋಧಿಸಿದರು.ಈ ಸಂದರ್ಭದಲ್ಲಿ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ ಸುಧಿನ್ ಧವಳಿಕರ್ ಮತ್ತು ಗೋವಾ ಫಾರ್ವರ್ಡ್ ಪಾರ್ಟಿಯ ವಿಜಯ ಸರ್ದೇಸಾಯಿ ಉಪ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು.ಅವರೊಂದಿಗೆ 10 ಶಾಸಕರು ಸಾವಂತ್ ಅವರ ಸಂಪುಟಕ್ಕೆ ಸೇರ್ಪಡೆಗೊಂಡರು. ಪರಿಕ್ಕರ್ ನಿಧನದ ಬೆನ್ನಲ್ಲೇ ಗೋವಾದಲ್ಲಿ ರಾಜಕೀಯ ಗೊಂದಲ ಉದ್ಭವಿಸಿತ್ತು. ಸುಧಿನ್ ಧವಳಿಕರ್ ಮತ್ತು ವಿಜಯ್ ಸರ್ದೇಸಾಯಿ ಇಬ್ಬರೂ ಮುಖ್ಯಮಂತ್ರಿ ಗಾದಿಗೆ ಬೇಡಿಕೆ ಇರಿಸಿದ್ದರು. ತಾವು ಈ ಹಿಂದೆ ಬೆಂಬಲ ನೀಡಿದ್ದು ಪರಿಕ್ಕರ್ ಅವರಿಗೇ ಹೊರತು ಬಿಜೆಪಿಗಲ್ಲ ಎಂದು ಅವರು ಹೇಳಿದ್ದರು. ಹಿರಿಯ ನಾಯಕ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ನಡೆಸ ಸಂಧಾನ ಸಭೆಯ ಬಳಿಕ ಇಬ್ಬರೂ ಮಿತ್ರಪಕ್ಷದ ನಾಯಕರು ಬಿಜೆಪಿಗೆ ಬೆಂಬಲ ಮುಂದುವರಿಸಲು ಒಪ್ಪಿಕೊಂಡರು.ಪಂಚಭೂತಗಳಲ್ಲಿ ಲೀನವಾದ ಮನೋಹರ್ ಪರಿಕ್ಕರ್40 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ ಪ್ರಸ್ತುತ 14 ಶಾಸಕರನ್ನು ಹೊಂದಿದ್ದು, 20 ಸದಸ್ಯರ ಬೆಂಬಲ ಹೊಂದಿದೆ. ಪರಿಕ್ಕರ್ ಸೇರಿದಂತೆ ಬಿಜೆಪಿಯ ಇಬ್ಬರು ಸದಸ್ಯರು ಮರಣ ಹೊಂದಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.ಕೊನೆಯುಸಿರುವವರೆಗೂ ಸೇವೆ ಸಲ್ಲಿಸಲು ಬಯಸಿದ್ದ ಮನೋಹರ್ ಪರಿಕರ್
ಹೀಗಾಗಿ ಪ್ರಸ್ತುತ ವಿಧಾನಸಭೆಯಲ್ಲಿ 36 ಸದಸ್ಯರು ಮಾತ್ರ ಇದ್ದಾರೆ. ಈ ಸಂಖ್ಯೆಯ ಬಲಾಬಲಕ್ಕೆ ಅನುಗುಣವಾಗಿ ಬಿಜೆಪಿ ಬಹುಮತ ಹೊಂದಿದೆ. ಇನ್ನು ಏಕೈಕ ದೊಡ್ಡ ಪಕ್ಷವಾಗಿ ಕಾಂಗ್ರೆಸ್ 15 ಶಾಸಕರನ್ನು ಹೊಂದಿದೆ. ಮ್ಯಾಜಿಕ್ ಸಂಖ್ಯೆ ತಲುಪಲು ಅದಕ್ಕೆ ಇನ್ನೂ ನಾಲ್ವರು ಶಾಸಕರು ಬೆಂಬಲ ಅಗತ್ಯವಾಗಿದೆ.

Share News

About Shaikh BIG TV NEWS, Hubballi

Check Also

ರಾಜ್ಯದಲ್ಲಿ ಇಂದು ರಾತ್ರಿ 8 ರಿಂದ ನೈಟ್ ಕರ್ಫ್ಯೂ ಜಾರಿ

ರಾಜ್ಯದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಹಾವಳಿ ಹೆಚ್ಚಾಗುತ್ತಿದ್ದು, ಇಂದು ರಾತ್ರಿ 8 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 8 …

Leave a Reply

Your email address will not be published. Required fields are marked *

You cannot copy content of this page