Breaking News

ಅಕ್ರಮ ಬೆಟ್ಟಿಂಗ್‌ ಆಯಪ್‌ ಪ್ರಚಾರ: ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್‌, ಪ್ರಣೀತಾ, ರಾಣಾಗೆ ಇ.ಡಿ. ತನಿಖೆ ಸಂಕಷ್ಟ!

ಅಕ್ರಮ ಬೆಟ್ಟಿಂಗ್‌ ಆಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ವಿಜಯ್ ದೇವರಕೊಂಡ, ನಟ ಪ್ರಕಾಶ್ ರಾಜ್, ನಟಿ ಪ್ರಣೀತಾ ಸುಭಾಷ್, ತೆಲುಗು ನಟರಾದ ರಾಣಾ ದಗ್ಗುಬಾಟಿ ಸೇರಿದಂತೆ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಜಂಗ್ಲೀ ರಮ್ಮಿ, ಎ23, ಜೀತ್‌ವಿನ್‌, ಪರಿಮ್ಯಾಚ್‌, ಲೋಟಸ್‌365 ರಂತಹ ಜೂಜಿನ ಆಯಪ್‌ಗಳಿಂದ ಹಣ ಪಡೆದು, ಅವುಗಳ ಪರ ನಟ, ನಟಿಯರು, ಜಾಲತಾಣ ಪ್ರಭಾವಿಗಳು ಪ್ರಚಾರ ಮಾಡುತ್ತಿದ್ದರು. ಆದರೆ ಈ ಆಯಪ್‌ಗಳು ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದ ಮೂಲಕ ಕೋಟ್ಯಂತರ ರು. ಮೌಲ್ಯದ ಅಕ್ರಮ ಹಣ ಗಳಿಸಿವೆ ಎಂದು ಆರೋಪವಿದೆ. ಈ ಹಿನ್ನೆಲೆಯಲ್ಲಿ 29 ಜನರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಪ್ರಕರಣದಲ್ಲಿ ಇವರ ಪಾತ್ರ ತನಿಖೆಗೆ ಮುಂದಾಗಿದೆ.

Share News

About BigTv News

Check Also

ಪತ್ನಿಯನ್ನು ಕತ್ತು ಹಿಸುಕಿ ಹತ್ಯೆಗೈದು ಇಡೀ ರಾತ್ರಿ ಶವದ ಪಕ್ಕದಲ್ಲೇ ಮಲಗಿದ್ದ ಪಾಪಿ ಪತಿ.!

ದೆಹಲಿ: ಮದ್ಯ ಸೇವಿಸುವುದನ್ನು ಪತ್ನಿ ವಿರೋಧಿಸಿದ್ದಕ್ಕೆ ಕೋಪಗೊಂಡ ಪತಿಯೊಬ್ಬ 32 ವರ್ಷದ ಗೀತಾ ಭಾಟಿ ಅವರನ್ನು ಕತ್ತು ಹಿಸುಕಿ ಹತ್ಯೆಗೈದ …

Leave a Reply

Your email address will not be published. Required fields are marked *