ಮಹಿಳೆಯೋರ್ವಳು ಹಲವು ಅಂಗಡಿಗಳ ಮಾಲಕರನ್ನು ನಂಬಿಸಿ ಚಿನ್ನಾಭರಣಗಳನ್ನು ಖರೀದಿಸಿ ಹಣ ನೀಡದೆ ವಂಚಿಸಿದ ಘಟನೆ ಶಿರ್ವದಲ್ಲಿ ನಡೆದಿದೆ.ಶಿರ್ವ ಮಸೀದಿ ಬಳಿಯ ನಿವಾಸಿ ಫರೀದಾ ಚಾಲಾಕಿ ಮಹಿಳೆ. 3 ಚಿನ್ನಾಭರಣ ಮಳಿಗೆಗಳಿಂದ ಸುಮಾರು 9,74,043 ಲ.ರೂ. ಮೌಲ್ಯದ 98.565 ಗ್ರಾಂ ಚಿನ್ನ ಖರೀದಿಸಿ ವಂಚಿಸಿರುವುದಾಗಿ ತಿಳಿದುಬಂದಿದೆ.ಆರೋಪಿ ಫರೀದಾ ಮತ್ತು ಅವಳ ತಂಡ ಮಂಗಳೂರು, ಬಜಪೆ, ಸುರತ್ಕಲ್, ಕಿನ್ನಿಗೋಳಿ, ಕೂಳೂರು ಮುಂತಾದ ಕಡೆ ಆಭರಣ ಖರೀದಿಸಿ ವಂಚಿಸಿದೆ. ಇದೇ ತಂಡ ಪಡುಬಿದ್ರಿ ಮತ್ತು ತ್ರಾಸಿಯಲ್ಲಿ ಕೂಡ ಇದೇರೀತಿ ವಂಚಿಸಲು ಪ್ರಯತ್ನಿಸಿದ್ದು, ವಂಚಕರ ಬಗ್ಗೆ ತಿಳಿದಿದ್ದ ಅಂಗಡಿ ಮಾಲಕರು ಆಭರಣ ನೀಡದೆ ವಂಚನೆಯಿಂದ ಪಾರಾಗಿದ್ದಾರೆ.ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಆರೋಪಿಯು ಯಾರ ಸಂಪರ್ಕಕ್ಕೂ ಲಭಿಸದೆ ತಲೆಮರೆಸಿಕೊಂಡಿದ್ದಾಳೆ. ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

