ಗಂಡನ ಕಿರುಕುಳಕ್ಕೆ ಬೇಸತ್ತು ರಕ್ಷಣೆ ಕೋರಿ ಪೊಲೀಸರಿಗೆ ದೂರು ಕೊಟ್ಟರೆ, ಪೋಲಿ ಪೊಲೀಸಪ್ಪನೇ ಬಂದು ತನ್ನೊಂದಿಗೆ ಮಲಗುತ್ತಿದ್ದಾನೆ ಎಂದು ಸಂತ್ರಸ್ತ ಮಹಿಳೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.ಗಂಡ-ಹೆಂಡತಿ ಇಬ್ಬರನ್ನೂ ಕೂರಿಸಿ ರಾಜಿ ಮಾಡಿಸಿ ಇನ್ನುಮುಂದೆ ಇಂತಹ ಕೃತ್ಯ ಮಾಡದೇ ಸುಖ ಸಂಸಾರ ಮಾಡಿಕೊಂಡು ಹೋಗುವಂತೆ ಎಚ್ಚರಿಕೆ ನೀಡಿದ ಬಂದಿದ್ದಾನೆ. ಇದಾದ ನಂತರ ಮಹಿಳೆ ಮತ್ತು ಆಕೆಯ ಗಂಡನ ಜೊತೆಗೆ ವಿಶ್ವಾಸದಿಂದ ಇದ್ದ ಪೊಲೀಸಪ್ಪ, ಬರಬರುತ್ತಾ ಮಹಿಳೆಯ ಮೇಲೆ ಕಣ್ಣು ಹಾಕಿದ್ದಾನೆ.ಕೊನೆಗೆ ಪೊಲೀಸಪ್ಪನೇ ಸಂತ್ರಸ್ತ ಮಹಿಳೆ ಪತಿಯ ಸಹಕಾರದಿಂದ ಆತನಿಗೆ ಒಂದಷ್ಟು ಹಣ ಕೊಟ್ಟು ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಲು ಮುಂದಾಗಿದ್ದಾನೆ.ಕೊನೆಗೆ ತನ್ನ ಜೀವನಕ್ಕೆ ಯಾವುದೇ ದಾರಿ ಕಾಣದ ಮಹಿಳೆ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಬಳಿ ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

