ಮಂಡ್ಯ: ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಮಂಡ್ಯ ಜಿಲ್ಲೆಯ ಹೆಮ್ಮೆಯ ಪುತ್ರ ಮಂಡ್ಯ ಜಿಲ್ಲೆ ಪಟ್ಟಣದ ಬೂಕನಕೆರೆ ಗ್ರಾಮದ ಬಿ.ಎಸ್.ಯಡಿಯೂರಪ್ಪನವರಿಗೆ ಶುಭಕೋರಿ ಶ್ರೀ ಭೂವರಹಾನಾಥಸ್ವಾಮಿಗೆ 58 ವಿವಿಧ ಬಗೆಯ ವಿಶೇಷ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು. ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಮಂಡ್ಯ ಜಿಲ್ಲೆ ಮಂಡ್ಯ ವರಹನಾಥಕಲ್ಲಹಳ್ಳಿಯ ಶ್ರೀ ಭೂದೇವಿ ಸಮೇತನಾದ ಭೂವರಹಾನಾಥಸ್ವಾಮಿಗೆ ರೇವತಿ ವಿಶೇಷಪೂಜೆ, ಪುಷ್ಪಾಭಿಷೇಕದ ನೆರವೇರಿಸಲಾಯಿತು.
58ಬಗೆಯ ವಿವಿಧ ಪುಷ್ಪಗಳು, ಹಾಲು, ಎಳನೀರಿನ ಅಭಿಷೇಕವನ್ನು ಭಕ್ತರು ಕಣ್ತುಂಬಿಕೊಂಡರು.
ಲೋಕಕಲ್ಯಾಣವಾಗಲಿ, ನೂತನವಾಗಿ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಭಕೋರಿ ಇದೇ ಸಂದರ್ಭದಲ್ಲಿ ಭೂ ವರಹಾನಾಥಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಪರಕಾಲಮಠದ ವ್ಯಾಪ್ತಿಗೆ ಸೇರಿರುವ ಭೂವರಹಾಸ್ವಾಮಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಅವರ ನೇತೃತ್ವದಲ್ಲಿ ಪೂಜಾ ಮತ್ತು ಅಭಿಷೇಕ ಕಾರ್ಯಕ್ರಮಗಳು ನಡೆದವು.
ಸಾವಿರಾರು ಭಕ್ತರು ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





