Breaking News

ಸಿಎಂ ಮಾಧ್ಯಮ ಸಂಜೀವಿನಿ ಯೋಜನೆ ಷರತ್ತು ಸಡಿಲಿಕೆಗೆ ‘ಕೆ.ವಿ.ಪ್ರಭಾಕರ್’ಗೆ ಕೆಯುಡಬ್ಲೂಜೆ ಮನವಿ

ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯಲ್ಲಿನ ಕಠಿಣ ಷರತ್ತಗಳನ್ನು ಸಡಿಲಿಸಿ, ಸರಳೀಕರಣ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಲ್ಲಿ ಮನವಿ ಮಾಡಿದೆ.ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಹಕ್ಕೊತ್ತಾಯಕ್ಕೆ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದು ಅಷ್ಟೇ ಅಲ್ಲ, ಬಜೆಟ್‌ನಲ್ಲಿಯೂ ಪ್ರಕಟಿಸಿ ನುಡಿದಂತೆ ನಡೆದಿದ್ದರು. ಈ ನಿಟ್ಟಿನಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಪಾತ್ರವೂ ಪ್ರಾಮುಖ್ಯವಾಗಿತ್ತು ಎನ್ನುವುದನ್ನು ಕೆಯುಡಬ್ಲ್ಯೂಜೆ ಮನವಿಯಲ್ಲಿ ಸ್ಮರಿಸಿದೆ.ನಿಯೋಗದಲ್ಲಿ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿ.ಮುಮ್ತಾಜ್ ಅಲೀಂ ಜೊತೆಗಿದ್ದರು.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *