Breaking News

ಕೃಷಿ ತ್ಯಾಜ್ಯದಿಂದ ಗ್ರೀನ್‌ ಹೈಡ್ರೋಜನ್‌; ಬೆಂಗಳೂರು IISC ವಿಶಿಷ್ಠ ಸಾಧನೆ

ಬೆಂಗಳೂರಲ್ಲಿ ಇರುವ ಭಾರತೀಯ ವಿಜ್ಞಾನ ಸಂಸ್ಥೆ(IISC) ಕೃಷಿ ತ್ಯಾಜ್ಯದಿಂದ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಯ ಯಶಸ್ವಿ ಸಂಶೋಧನೆ ನಡೆಸಿದ್ದು, ಕೇಂದ್ರ ಸರ್ಕಾರ ಇದಕ್ಕೆ ಉತ್ತೇಜನ ನೀಡಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.IISCಯಿಂದ ಆತ್ಮನಿರ್ಭರ ಆವಿಷ್ಕಾರ: ಸಾಮಾನ್ಯವಾಗಿ ಕೃಷಿ ತ್ಯಾಜ್ಯಗಳನ್ನು ಸುಟ್ಟು ಹಾಕಲಾಗುತ್ತಿದೆ. ಇದನ್ನು ಹಾಗೇ ಬಿಟ್ಟರೂ ಇದು ವಾತಾವರಣಕ್ಕೆ ಮೀಥೇನ್ ಅನ್ನು ಹೊರಸೂಸುತ್ತವೆ. ಆದರೆ ನಮ್ಮ ಭಾರತೀಯ ವಿಜ್ಞಾನ ಸಂಸ್ಥೆ ʼಕೃಷಿ ತ್ಯಾಜ್ಯ ಬಳಸಿಕೊಂಡು ಪರಿಸರ ಸ್ನೇಹಿ ಇಂಧನ ತಯಾರಿಸಲು ಸಾಧ್ಯʼವೆಂಬ “ನಿಜವಾದ ಆತ್ಮನಿರ್ಭರ ಆವಿಷ್ಕಾರ”ವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.ಕೃಷಿ ತ್ಯಾಜ್ಯದಿಂದ ಗ್ರೀನ್‌ ಹೈಡ್ರೋಜನ್‌ ಉತ್ಪಾದಿಸುವ ಇದೊಂದು ಇಂಗಾಲ-ತಗ್ಗಿಸುವ ವಿಶಿಷ್ಠ ಸಂಶೋಧನೆಯಾಗಿದೆ. ಇಲ್ಲಿ ಉತ್ಪತ್ತಿಯಾಗುವ ಪ್ರತಿ ಕಿಲೋಗ್ರಾಂ ಜಲಜನಕವು ವಾತಾವರಣದಿಂದ ಒಂದು ಕಿಲೋಗ್ರಾಂಗಿಂತ ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುತ್ತದೆ ಎಂದು ಹೇಳಿದರು.ಹಸಿರು ಜಲಜನಕದ ಪ್ರಸ್ತುತ ವೆಚ್ಚವನ್ನು ಪ್ರತಿ ಕಿಲೋಗ್ರಾಂಗೆ ₹300-400 ರಿಂದ ₹100ಕ್ಕೆ ಇಳಿಸುವುದು ತುರ್ತು ಅಗತ್ಯವಾಗಿದೆ. 2030ರ ವೇಳೆಗೆ ಪ್ರತಿ ಕೆ.ಜಿ.ಗೆ 1 ಡಾಲರ್‌ಗೆ ತರುವ ಅಮಿತಾಭ್ ಕಾಂತ್ ಅವರ ಗುರಿಯನ್ನು ಉಲ್ಲೇಖಿಸಿಸ ಸಚಿವ ಪ್ರಲ್ಹಾದ ಜೋಶಿ, ಇದನ್ನು ಗಮನಾರ್ಹ ರೀತಿಯಲ್ಲಿ ಪರಿಗಣಿಸಬೇಕಿದೆ ಎಂದು ಹೇಳಿದರು.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *