ಬೆಳ್ತಂಗಡಿ: ಮಹಿಳೆಯರ ಸಶಕ್ತೀಕರಣ ಜತೆಗೆ ಸ್ವಯಂ ಉದ್ಯೋಗ ಕಲ್ಪಿಸಿ, ತಾವು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ಇಂದು ಗ್ರಾಮೀಣ ಜನರ ನಾಡಿಮಿಡಿತ ವಾಗಿದೆ. ಕೇಂದ್ರ ಸರಕಾರ ಸಹಿತ ದೇಶದೆಲ್ಲೆಡೆ ನೂತನ ಯೋಜನೆಗಳನ್ನು ಆರಂಭಿಸುವ ಮುನ್ನ ಧರ್ಮಸ್ಥಳದ ಯೋಜನೆಗಳನ್ನು ಪ್ರಾಯೋಗಿಕವಾಗಿ ಅಧ್ಯಯನ ಮಾಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ನ.14ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ 600 ಕೋಟಿ ರೂ. ಲಾಭಾಂಶ ವಿತರಿಸಿ ಮಾತನಾಡಿದರು.
ಸ್ವಾತಂತ್ರೊತ್ತರದಿಂದ ಧರ್ಮಸ್ಥಳವು ಒಂದು ಸರಕಾರದ ಮಾದರಿಯಲ್ಲಿ ಗ್ರಾಮೀಣ ಜನರ ಸಶಕ್ತೀಕರಣಕ್ಕೆ ದುಡಿದಿದೆ. ಡಾ| ಹೆಗ್ಗಡೆಯವರ ನಾಯಕತ್ವದಿಂದ ರಾಜ್ಯದಲ್ಲಿ ಆರ್ಥಿಕ ಶಿಸ್ತು ಬಂದರೆ, ದೇಶದೆಲ್ಲೆಡೆ ಅವರ ಜ್ಞಾನ ಪಸರಿದೆ, ವಿಶ್ವಾದ್ಯಂತ ಅವರ ಯೋಜನೆ ಅನುಷ್ಠಾನ ಆಗುವಂತಿರುತ್ತದೆ. ಹಾಗಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮೆಚ್ಚಿ ರಾಜ್ಯಸಭಾ ಸದಸ್ಯ ಸ್ಥಾನ ನೀಡಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

