ಮನಸ್ಸಿನಲ್ಲಿ ಬೆಟ್ಟದಷ್ಟು ದುಃಖ ಉಮ್ಮಳಿಸಿ ಬರುತ್ತಿದ್ದರೂ ತೋರಿಸಿಕೊಳ್ಳದೆ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಅವರ ಕೊನೆಯ ಆಸೆಯಂತೆ ವ್ಯಕ್ತಿಯೊಬ್ಬರು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಮಂದಸೌರ್ನಲ್ಲಿ ನಡೆದಿದೆ.ನನ್ನ ಅಂತ್ಯಕ್ರಿಯೆ ನಡೆಯುವಾಗ ಆತ ಅಳು ಮೊಗದಲ್ಲಿ ಇರಬಾರದು ನಗು ನಗುತ್ತಾ ನನ್ನನ್ನು ಕಳುಹಿಸಿಕೊಡಬೇಕು ಎಂದು ಆಶಿಸಿದ್ದರು. ಕಣ್ಣೀರು ಹಾಗೂ ನಗುವಿನ ಈ ಸಂಗಮವನ್ನು ನೋಡಿ ಗ್ರಾಮಸ್ಥರು ಭಾವುಕರಾದರು. ಎಲ್ಲರೂ ಈ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ದೃಶ್ಯವನ್ನು ನೀಡಿ ಮೆಚ್ಚಿದ್ದಾರೆ. ಇಂದಿನ ಕಾಲದಲ್ಲಿ ಇಂಥಾ ಸ್ನೇಹ ಅಪರೂಪ ಎಂದು ಜನರು ಕೊಂಡಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

