ಹುಬ್ಬಳ್ಳಿ: ನಬಾರ್ಡ್ ಯೋಜನೆಯಿಂದ ಅನುದಾನ ಕಡಿತ ಮಾಡಿದ ವಿಚಾರ, ನಬಾರ್ಡ್ ನಿಂದ ಕೋ ಆಪರೇಟಿವ್ ವಲಯಕ್ಕೆ ನೀಡುವ ಸಾಲದಲ್ಲಿ ಕೊರತೆ ಆಗಿಲ್ಲ. ಮುಖ್ಯಮಂತ್ರಿಗಳು ಮನಸಿಗೆ ಬಂದಂಗೆ ಅಟ್ಟರ್ ನಾನ್ ಸೆನ್ಸ್ ಹೇಳಿಕೆ ನೀಡುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸರ್ಕಾರ ಜೀರೋ ಪರ್ಸೆಂಟ್ ಬಡ್ಡಿಗೆ ಸಾಲ ನೀಡುವ ನಿರ್ಧಾರ ಕೈಗೊಂಡಿದ್ದು, ಸಿದ್ದರಾಮಯ್ಯ ತೆಗೆದುಕೊಂಡ ನಿರ್ಧಾರವಲ್ಲ. ಮುಡಾ, ಅಬಕಾರಿ, ವಾಲ್ಮೀಕಿ ಹಗರಣದಲ್ಲಿ ಸಿಕ್ಕಿಕೊಂಡಿದ್ದಾರೆ. ಇದು ಚರ್ಚೆ ಆಗಬಾರದು ಎಂಬ ಉದ್ದೇಶದಿಂದ ಡೈವರ್ಟ್ ಮಾಡುತ್ತಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





