ಹುಬ್ಬಳ್ಳಿ: ದೇವರು ವರ ಕೊಟ್ಟರೂ ಪೂಜಾರಿ ಕೊಟ್ಟಿಲ್ಲ ಎಂಬ ಗಾದೆ ಮಾತು ವಾಣಿಜ್ಯ ನಗರಿ ಹುಬ್ಬಳ್ಳಿಯ ಮೀನು ಮಾರುಕಟ್ಟೆ ಉಪಯೋಗಕ್ಕೆ ಸಂಬಂಧಿಸಿದಂತೆ ಸತ್ಯವಾಗುತ್ತಿದೆ.

ಹುಬ್ಬಳ್ಳಿ ಹೈ-ಟೆಕ್ ಮೀನು ಮಾರುಕಟ್ಟೆ ನಿರ್ಮಾಣ ಆಗಿ ಬರೋಬ್ಬರಿ ಮೂರು ತಿಂಗಳು ಮುಗಿದಿದೆ. ಆದರೆ ಇದುವರೆಗೂ ಪಾಲಿಕೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಂದ ಮೀನು ಮಾರುಕಟ್ಟೆಯನ್ನು ಹಸ್ತಾಂತರ ಮಾಡಿಕೊಂಡು ಉದ್ಘಾಟನೆಗೆ ಮುಂದಾಗಿಲ್ಲ. ಹೀಗಾಗಿ ನೂರಾರು ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುವಂತಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ ಅನುದಾನದಡಿಯಲ್ಲಿ ಕಳೆದ ವರ್ಷ 5.6 ಕೋಟಿ ವೆಚ್ಚದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಆರಂಭಗೊಂಡಿತ್ತು. ಅದರಂತೆ ಅಧಿಕಾರಿವಳು ಕಾಮಗಾರಿ ಪೂರ್ತಿಗೊಳಿಸಿದ್ದಾರೆ. ಆದರೆ ಇದೀಗ ಕಾಮಗಾರಿಯೂ ಬಹುತೇಕ ಪೂರ್ತಿಗೊಂಡಿವೆ. ಆದರೂ ಉದ್ಘಾಟನೆಗೆ ಯಾವುದೇ ಸಿದ್ಧತೆಗಳು ನಡೆಯುತ್ತಿಲ್ಲ. ಹೀಗಾಗಿ ಮೀನು ಮಾರುಕಟ್ಟೆಯಲ್ಲಿ ನಮಗೆ ಮಾರಾಟಕ್ಕೆ ಅವಕಾಶ ಸಿಗುವುದು ಯಾವಾಗ ಎಂಬ ಬಗ್ಗೆ ಪ್ರಶ್ನೆ ಮಾಡುತ್ತಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನುತ್ತಾರೆ ನಾಗರಿಕರು.

ಇನ್ನು ನೂತನ ಮಾರುಕಟ್ಟೆ ಉದ್ಘಾಟನೆ ಆಗದಿರುವುದರಿಂದ ಪ್ರಸ್ತುತ ಮೀನು ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿಯೇ ಮೀನು ಮಾರಾಟ ನಡೆಯುತ್ತಿದೆ. ಇಲ್ಲಿ ತ್ಯಾಜ್ಯ ನೀರು ಸಹಿತ ವ್ಯಾಪಕ ಮಾಲಿನ್ಯದಿಂದ ಕೂಡಿದೆ. ಆ ದಾರಿಯಲ್ಲಿ ಸಾಗುವುದೇ ಕಷ್ಟ. ಮೂಗು ಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿಯಲ್ಲಿ ಮೀನು ಮಾರಾಟಗಾರರಿಗೆ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಮಾಲಿನ್ಯ ಸಂಸ್ಕರಣಾ ಘಟಕ ಇಲ್ಲದಿರುವುದರಿಂದ ತ್ಯಾಜ್ಯಗಳು ರಾಶಿ ರಾಶಿಯಾಗಿ ಬಿದ್ದುಕೊಂಡು ಸ್ವಚ್ಛತೆಯಿಲ್ಲದಂತಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ಆದರೆ ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳೋದು ಹೀಗೆ.

ಒಟ್ಟಿನಲ್ಲಿ ಸದ್ಯ ರಸ್ತೆಯಲ್ಲಿಯೇ ಮೀನು ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ಭಾರಿ ಕಿರಿಕಿರಿಯನ್ನು ಉಂಟಾಗುತ್ತುದ್ದು, ಇಲ್ಲಿಂದ ಹೊರಡುವ ದುರ್ಗಂಧದಿಂದಾಗಿ ಮೀನು ಖರೀದಿಸಲು ಮೂಗು ಮುಚ್ಚಿಕೊಂಡೇ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಇಲ್ಲಿಂದ ಮಾಲಿನ್ಯಯುಕ್ತ ನೀರು ಹರಿದು ಪ್ರಧಾನ ರಸ್ತೆಗೆ ಹರಿಯುತ್ತಿದೆ. ಹೀಗಾಗಿ ಅತ್ಯಾಧುನಿಕ ಮೀನು ಮಾರುಕಟ್ಟೆಗೆ ಶೀಘ್ರ ಉದ್ಘಾಟನೆಗೆ ದಿನ ನಿಗದಿಪಡಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

