ರಾಜ್ಯದಲ್ಲಿ ಹೊಸ ಮೈಲುಗಲ್ಲನ್ನು ನಮ್ಮ ಮೆಟ್ರೋ ದಾಖಲಿಸಿದೆ. ಹಳದಿ ಮಾರ್ಗದ ರೈಲು ಸೇರ್ಪಡೆಯ ಬಳಿಕ 10.48 ಲಕ್ಷ ಮಂದಿ ಒಂದೇ ದಿನ ಪ್ರಯಾಣ ಮಾಡಿದ್ದಾರೆ.ಹಳದಿ ಮಾರ್ಗದ ಸೇರ್ಪಡೆಯಿಂದಾಗಿ ಒಂದೇ ದಿನದಲ್ಲಿ ಮೆಟ್ರೊ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ನೇರಳೆ ಮಾರ್ಗದಲ್ಲಿ 4,51,816, ಹಸಿರು ಮಾರ್ಗದಲ್ಲಿ 2,91,677, ಹಳದಿ ಮಾರ್ಗದಲ್ಲಿ 52,215 ಮಂದಿ ಪ್ರಯಾಣಿಸಿದ್ದಾರೆ. 2,52,323 ಮಂದಿ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ (ಇಂಟರ್‌ಚೇಂಜ್) ಸಂಚಾರ ಬದಲಾಯಿಸಿದ್ದಾರೆ. ಒಟ್ಟು 10,48,031 ಮಂದಿ ಪ್ರಯಾಣಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

