Breaking News

ಬಿ.ಎಸ್,ಏಪ್.‌ ನಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಅದ್ದೂರಿಯಾಗಿ ಸ್ವಾಗತ ಕೋರಿದ ಗ್ರಾಮಸ್ಥರು

ಹುಬ್ಬಳ್ಳಿ: ಈತ ನಮ್ಮೂರ ಯೋಧ! ನಮ್ಮ ದೇಶದ ಹೆಮ್ಮಯ ಪುತ್ರ , ಗಡಿಯಲ್ಲಿ ಸೇವೆ ಸಲ್ಲಿಸಿ ಊರಿಗೆ ಬಂಧಾನ್‌ ನೋಡ್ರಿ ಎಂದು ಗ್ರಾಮದ ಜನರು ಸಂತೋಷದಿಂದ ಯೋಧನಿಗೆ ಸ್ವಾಗತ ಕೋರಿದ್ದಾರೆ ಮಕ್ಕಳು ಮಹಿಳೆಯರು ಹಾಗೂ ಗ್ರಾಮದ ಗುರುಹಿರಿಯರು ಹೆಮ್ಮೆಯ ಯೋಧನಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನು ಮಕ್ಕಳು, ಹಿರಿಯರು ವೀರಯೋಧನಿಗೆ ಹೂ ಕೊಟ್ಟು, ಕೈ ಕುಲಕುತ್ತಾ ಅಭಿನಂದನೆ ತಿಳಿಸಿದ್ದಾರೆ, ಹಿರಿಯರನ್ನ ಕಾಣುತ್ತಲೇ ತಾನೇ ಕಾಲಿಗೆ ಬಿದ್ದು ಅವರ ಆಶೀರ್ವಾದ ಬೇಡುತ್ತಾ ಶಿರಗುಪ್ಪಿ ಯೋಧ ಗುರುಪಾದಪ್ಪ ಸರಳತೆ ಮೆರೆದಿದ್ದಾರೆ,

ವಂದೇ ಮಾತರಂ.. ಬೋಲೋ ಭಾರತ್ ಮಾತಾ ಕೀ ಜೈ.. ಇಂಕ್ವಿಲಾಬ್ ಜಿಂದಾಬಾದ್.. ಎಲ್ಲೆಲ್ಲೂ ಜೈಕಾರ, ಘೋಷಣೆ. ತವರಿಗೆ ಬಂದ ವೀರ ಯೋಧನನ್ನ ಊರ ಮಂದಿ ಸ್ವಾಗತಿಸಿದ ಪರಿಯಿದು. ಭಾರತ ಮಾತೆಯ ಪುತ್ರನೇ ನಿನಗಿದೋ ನಮ್ಮೀ ಸ್ವಾಗತವೆನ್ನುತ್ತಾ ಬರಮಾಡಿಕೊಂಡ ರೀತಿಯಿದು. ಹೀಗೊಂದು ಅದ್ಭುತ ಸ್ವಾಗತ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು.

ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮ, ಗ್ರಾಮದ ಯುವಕ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಬರೋಬ್ಬರಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದ ಹಿನ್ನಲೆಯಲ್ಲಿ ಶಿರಗುಪ್ಪಿಯ ಗುರುಪಾದಪ್ಪ ಸಂಗಪ್ಪ ಯರಗುಪ್ಪಿ ಅವರಿಗೆ ಊರಿನಲ್ಲಿ ಹೃದಯಸ್ಪರ್ಶಿ ಸ್ವಾಗತ ಮಾಡಲಾಯ್ತು. ಊರ ಹಿರಿಯರು, ಕಿರಿಯರೆನ್ನದೇ ವೀರಯೋಧನನ್ನು ಬರಮಾಡಿಕೊಂಡರು. ಶಾಲಾ ಮಕ್ಕಳಂತೂ ಸಾಲಾಗಿ ನಿಂತು ತೆರೆದ ಜೀಪಿನಲ್ಲಿ ಆಗಮಿಸಿದ ಭಾರತೀಯ ಹೆಮ್ಮೆಯ ಪುತ್ರನಿಗೆ ಪುಷ್ಪ ಮಳೆಗರೆದು ಸ್ವಾಗತಿಸಿದ್ರು. ತವರೂರಿನಲ್ಲಿ ಈ ಸ್ವಾಗತ ಕಂಡು ಒಂದು ಕ್ಷಣ ಯೋಧ ಗುರುಪಾದಪ್ಪನವರು ಕೂಡಾ ಭಾವುಕರಾದರು.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *