Breaking News

ಶಿಶುಪಾಲನಾ ಕೇಂದ್ರ ಆಗಸ್ಟ್ 15ಕ್ಕೆ ಆರಂಭ-ಸಿದ್ದತೆ ಗಮನಿಸಿದ ಸಿಇಓ ಸ್ವರೂಪ

ಕುಂದಗೋಳ: ಕಳೆದ ಐದು ದಿನಗಳಿಂದ ಕುಂದಗೋಳ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆಯುತ್ತಿರುವ ಶಿಶುಪಾಲನಾ ಆರೈಕೆ ತರಬೇತಿ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವರೂಪ ಟಿ.ಕೆಯವರು ಭೇಟಿ ನೀಡಿದರು. ಹಾಗೂ ಶಿಶುಪಾಲನಾ ಆರೈಕೆದಾರರಿಗೆ ಉದ್ದೇಶ ಮತ್ತು ಸದುಪಯೋಗದ ಕುರಿತು ತಿಳಿಸಿದರು.

ಬಳಿಕ ಕುಂದಗೋಳ ತಾಲೂಕಿನಲ್ಲಿ ಶೀಘ್ರವೇ ಆರಂಭಗೊಳ್ಳಲಿರುವ 17 ಶಿಶುಪಾಲನಾ ಕೇಂದ್ರಗಳಿಗೆ ಭೇಟಿ ನೀಡಿ ಜಿಲ್ಲಾ ಪಂಚಾಯತ್ ಸಿಇಓ ಅವರು ಅಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ಕಟ್ಟಡದ ಸ್ಥಿತಿಗತಿ ಅವಲೋಕಿಸಿದರು.

ಕುಂದಗೋಳ ತಾಲೂಕಿನ ಕಮಡೊಳ್ಳಿ, ತರ್ಲಘಟ್ಟ, ಶಿರೂರು, ಗುಡೇನಕಟ್ಟಿ, ಹಿರೆನೇರ್ತಿ, ಯರಗುಪ್ಪಿ, ಬೆಟದೂರ ಗ್ರಾಮಗಳ ಶಿಶುಪಾಲನಾ ಕೇಂದ್ರಗಳನ್ನು ಗಮನಿಸಿದರು, ಆಗಸ್ಟ್ 15ರಂದು ಪ್ರಾರಂಭಗೊಳ್ಳಲಿರುವ ಶಿಶುಪಾಲನಾ ಕೇಂದ್ರಗಳ ಸಿದ್ಧತೆ ಬೇಗ ಮುಗಿಸುವಂತೆ ಆದೇಶಿಸಿದರು.

Share News

About BigTv News

Check Also

ಕಮಿಷನರ್ ಬಂದಿದ್ದು 2–3 ದಿನ..! ಇನ್ಸ್‌ಪೆಕ್ಟರ್ ಯಾರು, ಪಿಎಸ್ಐ ಯಾರು ಅನ್ನೋದೇ ಗೊತ್ತಿಲ್ಲ..!

ಹುಬ್ಬಳ್ಳಿ-ಧಾರವಾಡ: ನೂತನ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಹುಬ್ಬಳ್ಳಿಗೆ ಬಂದು ಇನ್ನೂ ಎರಡರಿಂದ ಮೂರು ದಿನಗಳಷ್ಟೇ ಆಗಿದೆ… ಹೊಸ …

Leave a Reply

Your email address will not be published. Required fields are marked *